ಪುರಲೆ ಕೆರೆ ಏರಿ ಮೇಲೆ ಕಾರ್ಮಿಕನ ದರೋಡೆ

shimogga rural police station
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ
Published on

ಶಿವಮೊಗ್ಗ: ದೀಪಾವಳಿ ಬೋನಸ್ ಅನ್ನು ಕೊಂಡೊಯ್ಯುವಾಗ ಬೈಕ್‌ನಲ್ಲಿ ನಾಲ್ವರು ಅಪರಿಚಿತರು ಪುರಲೆ ಕೆರೆ ಏರಿ ಮೇಲೆ ಅಡ್ಡಗಟ್ಟಿ 10,800 ರೂ. ದರೋಡೆ ಮಾಡಿದ್ದಾರೆ. ನಗರದ ಶಿವಪ್ಪ ನಾಯಕ ವೃತ್ತದಲ್ಲಿರುವ ಎಸ್.ವಿ. ಹೂವಿನ ಮಂಡಿಯ 35 ವರ್ಷದ ಕಾರ್ಮಿಕನ ಬಳಿ ಇದ್ದ ಹಣ ದರೋಡೆಗೆ ಮಾಡಲಾಗಿದೆ.

ಹೂವಿನ ಅಂಗಡಿ ಮಾಲೀಕರು ದೀಪಾವಳಿ ಹಬ್ಬದಲ್ಲಿ ಕೆಲಸ ಮಾಡಿದ ಕೂಲಿ ಬಾಬ್ತಾದ 10,800 ರೂ. ಕೊಟ್ಟಿದ್ದರು. ಹಣ ಪಡೆದು ರಾತ್ರಿ 10.30ಕ್ಕೆ ಅಂಗಡಿ ಬಾಗಿಲ ಬೀಗ ಹಾಕಿಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಕಾರ್ಮಿಕನನ್ನು ಪುರಲೆ ಗ್ರಾಮ ಕೆರೆ ಏರಿ ಬಳಿ ಅಪರಿಚಿತರಿಬ್ಬರು ಅಡ್ಡಗಟ್ಟಿದ್ದರು. ತಕ್ಷಣ ಮತ್ತಿಬ್ಬರು ಸಮೀಪದ ಅಲದ ಮರದ ಕಡೆಯಿಂದ ಬಂದವರು ಕಾರ್ಮಿಕನ ಅಂಗಿ ಜೇಬಿಗೆ ಕೈ ಹಾಕಿ ಬಲವಂತದಿಂದ 10,800 ರೂ. ಕಿತ್ತುಕೊಂಡಿದ್ದಾರೆ. ಜೇಬಿನಲ್ಲಿ ಮತ್ತೇನಿದೆ ಎಂದು ಬೆದರಿಕೆ ಹಾಕುತ್ತಿದ್ದಂತೆ ಅವರಿಂದ ಕಾರ್ಮಿಕ ತಪ್ಪಿಸಿಕೊಂಡು ಮನೆಗೆ ತೆರಳಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net