video/ ಬೆಂಗಳೂರು ನಿವಾಸಿಗಳೇ ರಾತ್ರಿ ಹೊರ ಬರುವ ಮುನ್ನ ಎಚ್ಚರ! ಆ್ಯಕ್ಟೀವ್​ ಆಗಿದೆ ರಾಬರಿ ಟೀಂ

robbary
Published on

ಬೆಂಗಳೂರು: ರಾಜ್ಯ ರಾಜಧಾನಿಯ ನಿವಾಸಿಗಳೇ ಎಚ್ಚರ! ನೀವು ರಾತ್ರಿ ವೇಳೆ ರಸ್ತೆಗೆ ಬರೋಕು ಮುನ್ನ ಈ ಸ್ಟೋರಿ ಓದಿ.

ಪೊಲೀಸ್ ಸಿಬ್ಬಂದಿಯಲ್ಲೂ ಕರೊನಾ ಸೋಂಕು ಹೆಚ್ಚಾಗಿ ಬಹುತೇಕ ಎಲ್ಲ ಠಾಣೆಯಲ್ಲೂ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ದರೋಡೆಗಾಗಿ ಫೀಲ್ಡಿಗೆ ಇಳಿದಿದ್ದಾರೆ! ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವಕರಿಬ್ಬರನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿರಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕರೊನಾ! 

ಮಡಿವಾಳ ಪೊಲೀಸ್ ಠಾಣೆ ಸೀಲ್​ಡೌನ್‌ ಆಗಿದ್ದ ಸಮಯದಲ್ಲೇ ಠಾಣಾ ವ್ಯಾಪ್ತಿಯ ತಾವರೆಕೆರೆ ಮುಖ್ಯರಸ್ತೆ ಭುವನಪ್ಪ ಲೇಔಟ್​ನಲ್ಲಿ ರಾಬರಿ ನಡೆದಿದೆ. ಜೂ. 27ರ ಮಧ್ಯರಾತ್ರಿ ಎರಡು ಬೈಕ್​ಗಳಲ್ಲಿ ಮೂವರಂತೆ ಬಂದ ದುಷ್ಕರ್ಮಿಗಳು ಇಬ್ಬರು ಯುವಕರನ್ನ ನಡುರಸ್ತೆಯಲ್ಲೇ ಅಡ್ಡಗಟ್ಟಿ ಚಾಕು ತೋರಿಸಿ ಅಟ್ಯಾಕ್ ಮಾಡಿದ್ದಾರೆ.

ಜೂ.27ರ ಮಧ್ಯರಾತ್ರಿ 12.30ಕ್ಕೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಗೌರವ್ ಅಗರ್​ವಾಲ್( 27 )ಮತ್ತು ಸ್ನೇಹಿತ ಮನೆಗೆ ಹೋಗುತ್ತಿದ್ದರು. ಆ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರ ಬಳಿ ರಾಬರಿಗೆ ಮುಂದಾಗಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೆಳಗೆ ಬೀಳಿಸಿ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಗೌರವ್ ಅಗರ್​ವಾಲ್ ಮತ್ತು ಇವರ ಸ್ನೇಹಿತನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net