ಮುಂಬೈಗೆ ತನಿಖಾ ತಂಡ - ವಾರ ಕಳೆದರೂ ಸಿಗದ ದರೋಡೆ ಸುಳಿವು

Channagiri, Police, Complaint, Robbery,
Published on

ವಿಟ್ಲ: ಬೋಳಂತೂರು ನಾರ್ಶ ಉದ್ಯಮಿ ಸುಲೈಮಾನ್ ಹಾಜಿ ಮನೆ ದರೋಡೆ ಪ್ರಕರಣವನ್ನು ಭೇದಿಸಲು ಪೊಲೀಸ್ ಇಲಾಖೆ ಹಗಲಿರುಳು ತನಿಖೆ ಮುಂದುವರಿಸಿದ್ದು, ಎಲ್ಲರ ಚಿತ್ತ ಈಗ ಮುಂಬೈ ಕಡೆಗೆ ತಿರುಗಿದೆ.

ಕೇರಳ ಹಾಗೂ ತಮಿಳುನಾಡು ಭಾಗಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ ಪೊಲೀಸರ ತಂಡ ಸದ್ಯ ಭೂಗತ ಪಾತಕಿಗಳಿರುವ ಮುಂಬೈ ಕಡೆಗೆ ಪ್ರಯಾಣ ಬೆಳೆಸಿದೆ. ದರೋಡೆಕೋರರು ಮಹಾನಗರಕ್ಕೆ ತೆರಳಿ ಅಡಗಿ ಕುಳಿತಿರುವ ಮಾಹಿತಿ ಲಭಿಸಿದೆ ಎಂದು ಹೇಳಲಾಗುತ್ತಿದೆ.

ಸುಲೈಮಾನ್ ಹಾಜಿ ತಂದೆ ೩೨ ಸೆಂಟ್ಸ್ ಜಾಗ ಮಾತ್ರ ಹೊಂದಿದ್ದರು. ಇಂದು ೨ ಸಾವಿರ ಕೋಟಿಗೂ ಅಽಕ ಮೌಲ್ಯದ ಜಾಗ ಹಾಗೂ ವಹಿವಾಟು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಬೀಡಿ ಉದ್ಯಮದ ನಡೆಸಿಕೊಂಡೇ ಇಷ್ಟು ದೊಡ್ಡ ಮೊತ್ತವನ್ನು ಸಂಪಾದಿಸಲು ಸಾಧ್ಯವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬೀಡಿ ಉದ್ಯಮದಲ್ಲಿ ವಾರಕ್ಕೆ ೧.೬೦ ಕೋಟಿ ರೂ.ಆದಾಯ ಬರುತ್ತಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ವ್ಯವಹಾರ ನಡೆಸಬಾರದೆಂಬ ಕಾನೂನು ಇದ್ದು, ೩೦ ಲಕ್ಷ ರೂ.ನಗದು ಇತ್ತೆಂದು ಪೊಲೀಸರಿಗೆ ದೂರು ನೀಡಲಾಗಿದೆ. ತೆರಿಗೆ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಇಷ್ಟು ದೊಡ್ಡ ಮೊತ್ತವನ್ನು ನಗದು ರೂಪದಲ್ಲಿ ಇಟ್ಟುಕೊಂಡಿದ್ದರೂ, ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ತನಿಖೆಗೆ ಮುಂದಾಗದಿರುವುದು ಹಲವು ಅನುಮಾನ ಹುಟ್ಟುಹಾಕುವಂತೆ ಮಾಡಿದೆ.

ಸಾರ್ವಜನಿಕರ ಕುತೂಹಲ!

ದರೋಡೆಕೋರರು ಐದು ಗೋಣಿಚೀಲದಲ್ಲಿ ಹಣ ಎಷ್ಟು ತೆಗೆದುಕೊಂಡು ಹೋಗಿರಬಹುದೆಂಬ ಕುತೂಹಲ ಮೂಡಿದೆ. ಕೆಲವರು ೫೦೦ ಮುಖಬೆಲೆ ನೋಟಿನ ಒಂದು ಕಟ್ಟು (೫೦ ಸಾವಿರ) ತೂಕಕ್ಕೆ ಹಾಕಿದಾಗ ಸುಮಾರು ೧೦೦ ಗ್ರಾಂ ಬಂದಿದೆ. ಇದರಂತೆ ಬಬ್ಬ ವ್ಯಕ್ತಿಗೆ ಗೋಣಿಯನ್ನು ಎತ್ತಿ ಎಂದು ಕಡೆಯಿಂದ ಇನ್ನೊಂದು ಕಡೆಗೆ ಇಡಲು ಸುಮಾರು ೩೦ರಿಂದ ೩೫ ಕೆಜಿ ಸಾಧ್ಯವಿದ್ದು, ಇದೇ ತೂಕದಷ್ಟು ನೋಟು ತುಂಬಿದ್ದರೆ ಒಂದೊಂದು ಚೀಲದಲ್ಲಿ ೨ ಕೋಟಿ ಇದ್ದಿರಬಹುದೆಂಬ ಆಲೋಚನೆ ಸಾರ್ವಜನಿಕರದ್ದಾಗಿದೆ. ೫ ಗೋಣಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆಂದು ಮೂಲಗಳು ದೃಢಪಡಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net