

ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಽಕಾರಿಗಳ ಸೋಗಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಽಸಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಚಲನವಲನಗಳ ಮಹತ್ವದ ಸುಳಿವನ್ನು ಪಡೆದ ತಂಡ ವಿವಿಧ ರಾಜ್ಯಗಳಲ್ಲಿ ಶೋಧಕ್ಕೆ ಮುಂದಾಗಿದೆ.
ಸುಲೈಮಾನ್ ಹಾಜಿ ಅವರ ಚಲನವಲನಗಳ ಮಾಹಿತಿ ಸಂಗ್ರಹ ಸುಮಾರು ಮೂರು ದಿನಗಳಿಂದ ನಡೆದಿದೆ ಎನ್ನಲಾಗುತ್ತಿದೆ. ಸ್ಪಷ್ಟ ಮಾಹಿತಿ ಹೊಂದಿದವರಿಂದಲೇ ಸಂಪೂರ್ಣ ಮಾಹಿತಿ ದರೋಡೆಕೋರರಿಗೆ ಲಭಿಸಿದೆ ಎನ್ನಲಾಗುತ್ತಿದೆ.
ಕೃತ್ಯಕ್ಕೆ ಮಾರುತಿ ಎರ್ಟಿಗಾ ಕಾರನ್ನು ಬಳಸಲಾಗಿದ್ದು, ಕುಡ್ತಮುಗೇರು, ಕೋಡಪದವು, ಬೋಳಂತೂರು, ಸುರಿಬೈಲು ಆಸುಪಾಸಿನಲ್ಲಿ ಸುತ್ತಾಡಿಕೊಂಡಿರುವುದು ಬಹಿರಂಗಗೊಂಡಿದೆ. ನಾರ್ಶದಿಂದ ಕಲ್ಲಡ್ಕ ಮೂಲಕ ಮಂಗಳೂರಿಗೆ ಕಾರು ಸಾಗಿದೆ ಎಂದು ಹೇಳಲಾಗುತ್ತಿದ್ದು, ಟೋಲ್‌ಗೇಟ್‌ನಲ್ಲಿ ಕಾರಿನ ಮಹತ್ವದ ಸುಳಿವು ಲಭಿಸಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಅಽಕ್ಷಕ ಯತೀಶ್ ಎನ್. ನೇತೃತ್ವದಲ್ಲಿ ಹಿರಿಯ ಅಽಕಾರಿಗಳ ಸಭೆ ನಡೆದಿದ್ದು, ೨೪ ತಾಸಿನಲ್ಲಿ ತನಿಖೆಯಲ್ಲಿ ಆಗಿರುವ ಪ್ರಗತಿ ಬಗ್ಗೆ ಚರ್ಚೆಗಳಾಗಿದೆ. ಜತೆಗೆ ಈಗಾಗಲೇ ಅಪರಾಧ ಪ್ರಕರಣ ಪತ್ತೆ ಹಚ್ಚುವಲ್ಲಿ ಪರಿಣತಿ ಹೊಂದಿದ ಜಿಲ್ಲೆಯ ವಿವಿಧ ಅಽಕಾರಿಗಳ ತಂಡ ರಚಿಸಿ ತನಿಖೆಗೆ ವೇಗ ನೀಡಲಾಗಿದೆ.