6 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿದ್ದು ಮನೆಗೆಲಸದವರೇ...

Robbery
Published on

ಬೆಂಗಳೂರು: ಕೋರಮಂಗಲದಲ್ಲಿ ಮನೆ ಕೆಲಸಗಾರರೇ ಉದ್ಯಮಿಯೊಬ್ಬರ ಮಗಳನ್ನು ಬೆದರಿಸಿ 6 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಕೋರಮಂಗಲ 4ನೇ ಬ್ಲಾಕ್ ನಿವಾಸಿ ಉದ್ಯಮಿ ಮದನ್ ರೆಡ್ಡಿ ಎಂಬುವವರ ಮನೆಯಲ್ಲಿ ಭಾನುವಾರ ಕೃತ್ಯ ನಡೆದಿದೆ.

ಮದನ್ ಕುಟುಂಬ ಸಮೇತರಾಗಿ ಹೊಸೂರಿನಲ್ಲಿರುವ ತಮ್ಮ ಫಾರಂ ಹೌಸ್​ಗೆ ಹೋಗಿದ್ದರು. ಪುತ್ರಿ ಮಾತ್ರ ಮನೆಯಲ್ಲೇ ಇದ್ದಳು. ಮದನ್ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ 3 ಮಂದಿ ಮನೆ ಕೆಲಸದವರು ಭಾನುವಾರ ಬೆಳಗಿನ ಜಾವ 5 ಗಂಟೆಗೆ ಮನೆ ಕೆಲಸದವರು ಮೊದಲ ಮಹಡಿಯಲ್ಲಿದ್ದ ತಿಜೋರಿಯಲ್ಲಿಟ್ಟಿದ್ದ ಹಣ ಕದಿಯುತ್ತಿದ್ದರು. ಶಬ್ದ ಕೇಳಿ ಮದನ್ ರೆಡ್ಡಿ ಪುತ್ರಿ ಬಂದು ನೋಡಿದಾಗ ಮನೆ ಕೆಲಸದವರು ಕಳ್ಳತನ ಮಾಡುತ್ತಿರುವುದು ಕಂಡು ಬಂದಿತ್ತು. ಆಕೆ ಜೋರಾಗಿ ಕಿರುಚಿದಾಗ, ಕೆಲಸಗಾರರು ಬೆದರಿಸಿ ಮನೆಯಲ್ಲಿದ್ದ 6 ಲಕ್ಷ ರೂ. ಹಾಗೂ ಚಿನ್ನಾಭರಣ ಸಮೇತ ಪರಾರಿಯಾಗಿದ್ದರು. ಮನೆಕೆಲಸದವರು ಲಾಕರ್ ಒಡೆದಿರಲಿಲ್ಲ. ಅದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿತ್ತು ಎನ್ನಲಾಗಿದೆ.

ಪುತ್ರಿ ಪಾಲಕರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಮದನ್ ರೆಡ್ಡಿ ನೆರೆ-ಹೊರೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳೀಯರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಕರಣದ ದಾಖಲಿಸಿಕೊಂಡು ಪರಾರಿಯಾದ ಮನೆ ಕೆಲಸದವರಿಗೆ ಶೋಧ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net