ಮನೆಯಲ್ಲಿದ್ದವರನ್ನು ಕುರ್ಚಿಗೆ ಕಟ್ಟಿಹಾಕಿ ದರೋಡೆ

crime
Published on

ಹುಬ್ಬಳ್ಳಿ: ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರನ್ನು ಕಟ್ಟಿಹಾಕಿ, ಬೆಲೆಬಾಳುವ ಸಾಮಗ್ರಿ ದೋಚಿ ಪರಾರಿಯಾದ ಘಟನೆ ಶನಿವಾರ ಮಧ್ಯರಾತ್ರಿ ಇಲ್ಲಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಧ್ಯರಾತ್ರಿ 2.30ರ ವೇಳೆಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ನ4-5 ದರೋಡೆಕೋರರು ಹೊರಗಡೆಯಿದ್ದ ವಾಚ್‌ಮನ್‌ನನ್ನು ಕಟ್ಟಿಹಾಕಿ ಬಂದು, ಮನೆಯಲ್ಲಿದ್ದ ವಿಜಯಕುಮಾರ ಸುತಾರಿಯಾ ಹಾಗೂ ಅವರ ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ದರೋಡೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಳಗ್ಗೆ ಏಳು ಗಂಟೆ ವೇಳೆಗೆ ಮೇಲ್ಗಡೆಯಿದ್ದ ವಿಜಯಕುಮಾರ ಪುತ್ರ ಸಚಿನ್ ಕೆಳಗಿಳಿದು ಬಂದಾಗ ತಮ್ಮ ತಂದೆ-ತಾಯಿನ್ನು ಕೊಠಡಿಯೊಂದರಲ್ಲಿ ಕಟ್ಟಿಹಾಕಿರುವುದನ್ನು ನೋಡಿದ್ದಾರೆ. ಆಗ ದರೋಡೆ ನಡೆದಿರುವು ವಿಷಯ ಬಯಲಾಗಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭೇಟಿ ನೀಡಿ ಪರಿಶೀಲಿಸಿ, ‘ದರೋಡೆಕೋರರ ತಂಡ ಮನೆಯಲ್ಲಿದ್ದವರನ್ನು ಕೂಡಿ ಹಾಕಿದೆ. ಯಾವ ವಸ್ತುಗಳು ಕಳವಾಗಿವೆ ಗೊತ್ತಿಲ್ಲ. ಸಿಸಿ ಕ್ಯಾಮರಾ ಫುಟೇಜ್ ಸಿಕ್ಕಿದೆ. ವಿದ್ಯಾಗಿರಿ ಮತ್ತು ಗೋಕುಲ ರೋಡ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇಲ್ಲಿ ದರೋಡೆ ನಡೆಸಿದ ತಂಡ ಯವುದು ? ಎಂದು ಪತ್ತೆ ಹಚ್ಚಲಾಗುವುದು. ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net