

ಹುಬ್ಬಳ್ಳಿ: ರಾಜ್ಯದ ಬೀದರ್ ಹಾಗೂ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಪ್ರಕರಣದ ಸದ್ದು ನಡುವೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಂಡವೊಂದು ಡಕಾಯಿತಿಗಳಿದಿರುವುದು ಬೆಳಕಿಗೆ ಬಂದಿದೆ.
ನವನಗರದ ಕೆನರಾ ಬ್ಯಾಂಕ್ ಶಾಖೆಗೆ ಭಾನುವಾರ ತಡರಾತ್ರಿ ನುಗ್ಗಿದ ತಂಡ ದರೋಡೆ ಯತ್ನ ಮಾಡಿದೆ ಎನ್ನಲಾಗುತ್ತಿದೆ. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ವಿಷಯ ಗೊತ್ತಾಗಿದೆ.
ಬ್ಯಾಂಕ್ ಮುಂಭಾಗದ ಸೆಟರ್ ಮುರಿದಿದೆ. ಬೀಗವನ್ನೂ ಒಡೆದು ಹಾಕಿದೆ. ಆದರೆ, ಈ ತಂಡ ಸಂಪೂರ್ಣವಾಗಿ ದರೋಡೆ ಮಾಡಿಲ್ಲ. ಮುರಿದ ಶೆಟ್ಟರ್, ಬೀಗ ಬಿಟ್ಟು ಪರಾರಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ನವನಗರ ಠಾಣೆ ಪೊಲೀಸರು, ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದೆ. ಇನ್ನೂ ಈ ಕುರಿತು ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿಲ್ಲ.