ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಸೆರೆ

doddapete
Published on

ಶಿವಮೊಗ್ಗ: ಎನ್.ಟಿ.ರಸ್ತೆಯ ಗಜಾನನ ಗೇಟ್ ಬಳಿ ದರೋಡೆಗೆ ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು ಖಾರದ ಪುಡಿ, ದೊಣ್ಣೆ ಮತ್ತು ಚಾಕು ಜಪ್ತಿ ಮಾಡಿದ್ದಾರೆ.

ಅಣ್ಣಾನಗರದ 8ನೇ ಕ್ರಾಸ್‌ನ ಸಿದ್ಧಾರ್ಥ್ 21), ಟಿಪ್ಪುನಗರದ 7ನೇ ಕ್ರಾಸ್‌ನ ಸಾದಿಕ್ ಉಲ್ಲಾ (21), ಸೊರಬ ತಾಲೂಕಿನ ಹಿರೇಮಳಲಿ ಗ್ರಾಮದ ವೀರೇಶ್ (28), ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯ ಅಭಿನಂದ್ (24) ಬಂಧಿತರು. ಟಿಪ್ಪುನಗರದ ಜಾಹೀರ್ ಪರಾರಿಯಾಗಿದ್ದಾನೆ.

ಗಜಾನನ ಗೇಟ್ ಬಳಿ ಐವರು ಯುವಕರು ದೊಣ್ಣೆ, ಚಾಕು ಖಾರದ ಪುಡಿ ಹಿಡಿದು ದರೋಡೆಗೆ ಸಂಚು ಹಾಕಿಕುಳಿತ್ತಿದ್ದ ಐವರು ಯುವಕರ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net