

ಕಾಸರಗೋಡು: ಕುಂಬಳೆ ಮುಳಿಯಡ್ಕ ನಿವಾಸಿ ಅಬ್ದುಲ್ ರಶೀದ್ ಎಂಬುವರನ್ನು ತಂಡವೊಂದು ಹಾಡಹಗಲೇ ಕಾರಿನಲ್ಲಿ ಅಪಹರಿಸಿ, 18.46 ಲಕ್ಷ ರೂ. ದರೋಡೆ ನಡೆಸಿದೆ. ಮೇ 6ರಂದು ಘಟನೆ ನಡೆದಿದ್ದು, ಮಧ್ಯಾಹ್ನ ಪೇಟೆಯಲ್ಲಿ ನಿಂತಿದ್ದ ರಶೀದ್‌ನನ್ನು ಕಾರಿನಲ್ಲಿ ಆಗಮಿಸಿದ ತಂಡ ಬಲವಂತವಾಗಿ ಕಾರಿಗೇರಿಸಿ ಸೀತಾಂಗೋಳಿ ಭಾಗಕ್ಕೆ ಕರೆದೊಯ್ದಿತ್ತು. ಮಾರ್ಗಮಧ್ಯೆ ಮತ್ತೆ ಇಬ್ಬರನ್ನು ಕಾರಿಗೆ ಹತ್ತಿದ್ದು, ಈ ಸಂದರ್ಭ ತಂಡ ಚಾಕು ತೋರಿಸಿ, ಹಲ್ಲೆ ನಡೆಸಿ ಅವರ ಬ್ಯಾಂಕ್ ಖಾತೆಗೆ 18,46,127 ರೂ. ವರ್ಗಾಯಿಸಿಕೊಂಡು ಪೆರ್ಮುದೆ ಬಳಿ ಇಳಿಸಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯೂಸುಫ್ ಸೇರಿದಂತೆ ಮೂವರ ವಿರುದ್ಧ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.