ದರೋಡೆ ಆರೋಪಿಗಳು ಬಳಸಿದ್ದ ಆಟಿಕೆ ಬಂದೂಕು ವಶ

Robbery
Published on

ಕಾಸರಗೋಡು: ಹೊಸದುರ್ಗ ಕಲ್ಯಾಣ್ ರಸ್ತೆಯ ಕ್ರಶರ್ ಸಂಸ್ಥೆ ಪ್ರಬಂಧಕನನ್ನು ತಡೆದು, ಬಂದೂಕು ತೋರಿಸಿ 12.30 ಲಕ್ಷ ರೂ. ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳು ಬಳಸಿದ್ದ ಆಟಿಕೆ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದರೋಡೆ ನಡೆಸಿ ಪರಾರಿಯಾಗಲೆತ್ನಿಸಿದ ಹೊರ ರಾಜ್ಯ ಕಾರ್ಮಿಕರಾದ ಮುಹಮ್ಮದ್ ಇಬ್ರಾಹಿಂ ಆಲಂ(21), ಮುಹಮದ್ ಮಾಲಿಕ್ ಅಲಿಯಾಸ್ ಎಂ.ಡಿ.ಮಾಲಿಕ್(21), ಮುಹಮ್ಮದ್ ಫಾರೂಕ್(26) ಹಾಗೂ ಅಸ್ಸಾಂ ಹಜೋಯ್ ಜಿಲ್ಲೆಯ ಧನಂಜಯ್ ಭೋರಾ(22) ಎಂಬುವರನ್ನು ಮಂಗಳೂರು ಪೊಲೀಸರ ನೆರವಿನಿಂದ ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದರು. ಹೊಸದುರ್ಗ ಠಾಣೆ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಕೋಟಚ್ಚೇರಿಯ ಬಂದೂಕು ಎಸೆದಿರುವ ಪ್ರದೇಶಕ್ಕೆ ಕರೆತಂದು ಸಮೀಪದ ಕುರುಚಲು ಪೊದೆಯಿಂದ ಬಂದೂಕು ವಶಪಡಿಸಿಕೊಂಡಿದ್ದಾರೆ.

ಕಾಞಂಗಾಡಿನಲ್ಲಿ ಕಾರ್ಯಾಚರಿಸುತ್ತಿರುವ ಜಾಸ್ ಗ್ರಾನೈಟ್ ಅಗ್ರಿಗೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರಬಂಧಕ ಕೋಯಿಕ್ಕೋಡ್ ನಿವಾಸಿ ಪಿ.ಪಿ.ರವೀಂದ್ರನ್ ಎಂಬುವರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net