ಹಾಡಹಗಲೇ 4.20 ಲಕ್ಷ ರೂ. ಸುಲಿಗೆ

robbery
Published on

ಮಂಗಳೂರು: ಚಿಲಿಂಬಿಯಲ್ಲಿ ಮಂಗಳವಾರ ಹಣ ಹಿಡಿದುಕೊಂಡು ಬ್ಯಾಂಕ್‌ಗೆ ಹೋಗುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್‌ಗೆ ಹಲ್ಲೆ ಮಾಡಿ 4.20 ಲಕ್ಷ ರೂ. ಸುಲಿಗೆ ಮಾಡಿದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿನಗರ ಪೆಟ್ರೋಲ್ ಬಂಕ್ ಮ್ಯಾನೇಜರ್ ಭೋಜಪ್ಪ (57) ಎಂಬುವರು ಮಧ್ಯಾಹ್ನ 12.30ರ ವೇಳೆ ಉರ್ವ ಚಿಲಿಂಬಿಯಲ್ಲಿರುವ ಬ್ಯಾಂಕ್‌ನ ಖಾತೆಗೆ ಹಾಕಲು 4.20 ಲಕ್ಷ ರೂ. ಬ್ಯಾಗಿನಲ್ಲಿಟ್ಟು ತೆರಳುತ್ತಿದ್ದರು. ಚಿಲಿಂಬಿಯಲ್ಲಿ ಬೈಕ್ ಯೂ ಟರ್ನ್ ಮಾಡಿ ಬ್ಯಾಂಕ್‌ನತ್ತ ತೆರಳುತ್ತಿದ್ದಾಗ ಆನ್‌ಲೈನ್ ುಡ್ ಡೆಲಿವರಿ ಸಂಸ್ಥೆಯ ಟಿ ಶರ್ಟ್ ಹಾಕಿದ್ದ ಇಬ್ಬರು ಬೈಕ್ ನಿಲ್ಲಿಸಿ ಭೋಜಪ್ಪ ಅವರನ್ನು ತಡೆದು, ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾರೆ. ಭೋಜಪ್ಪ ವಿಚಲಿತರಾದಾಗ ಆರೋಪಿಗಳು ಹಣದ ಬ್ಯಾಗ್ ಕಸಿದು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಭೋಜಪ್ಪರ ತಲೆ, ಭುಜಕ್ಕೆ ಗಾಯವಾಗಿದೆ. ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net