

ಯಲ್ಲಾಪುರ: ಕಣ್ಣಿಗೆ ಖಾರಾಪುಡಿ ಎರಚಿ ಬೈಕ್ ಮತ್ತು ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳ ಗ್ಯಾಂಗ್ ಅನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಮೀರ್ ಅದಂ ಆದಿಲ್ ಮೀರ್ ಮುನಾಫ್, ರವಿ ನಾರಾಯಣ ಸಿದ್ದಿ, ಮಹಮ್ಮದ್ ರಿಜ್ವಾನ ಮೆಹಬೂಬ ಬಿಜಾಪುರ, ಜಹಿರುದ್ದಿನ್ ಜೈರೋ ದಸ್ತಗಿರಿ ಖಾದರಬಾಯಿ, ನಾಗೇಂದ್ರ ಟುಡೋ ಬಾಬು ಸಿದ್ದಿ ಬಂಧಿತರು.
ಶಿರಸಿಯ ಅಕ್ತರ್ ಗಂಗೊಳ್ಳಿ ಎಂಬವರು ಯಲ್ಲಾಪುರದಿಂದ ಶಿರಸಿಗೆ ಸ್ಕೂಟಿಯ ಮೇಲೆ ಹೊರಟಾಗ ಹಲಸ್ಕಂಡ ಕ್ರಾಸ್ ಬಳಿ ಮೂತ್ರ ವಿಸರ್ಜನೆಗೆ ನಿಂತಿದ್ದರು. ಆಗ ಈ ಐವರು ದಾರಿ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ, ಬೈಕ್ ಮತ್ತು 50 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಸಾವಿರ ರೂ ನಗದು, ದರೋಡೆ ಮಾಡಿದ ಸ್ಕೂಟಿ, ಕೃತ್ಯಕ್ಕೆ ಬಳಸಿದ ಎರಡು ಸ್ಕೂಟಿ, ಮೊಬೈಲ್ ವಶಕ್ಕೆ ಪಡೆದಿದ್ದಾರೆ.