ಕಲಬುರಗಿ ಹಗಲುದರೋಡೆಕೋರರ ಅರೆಸ್ಟ್: 2.86 ಕೆ.ಜಿ. ಬಂಗಾರ ಜಪ್ತಿ

IMG_20250721_142305
Published on

ಕಲಬುರಗಿ: ಕಲಬುರಗಿಯಲ್ಲಿ ಹಾಡುಹಗಲೇ ಬಂಗಾರದ ಅಂಗಡಿ ದರೋಡೆ ಪ್ರಕರಣ

ಮೂವರು ಕುಖ್ಯಾತ ದರೋಡೆಕೊರರ ಬಂಧಿಸಿರುವ ಪೊಲೀಸರು, ಬಂಧಿತರಿಂದ ಒಟ್ಟು 2 ಕೋಟಿ 10 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 4 ಲಕ್ಷದ 80 ಸಾವಿರ ಮೌಲ್ಯದ ನಗದು ಹಣ ಜಪ್ತಿ ಮಾಡಿಕೊಂಡಿದ್ದಾರೆ.

ಮುಂಬೈನ್ ಅಯೋದ್ಯಾ ಪ್ರಸಾದ್ ಚವ್ಹಾಣ್(48), ಪಶ್ಚಿಮ ಬಂಗಾಳದ ಪಾರೂಕ್ ಮಲ್ಲಿಕ್ ( 40) ಹಾಗೂ ಮುಂಬೈ ನಗರದ ಸೋಹೆಲ್ ಶೇಕ್ (30) ಬಂಧಿತರಾಗಿದ್ದಾರೆ.

ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಜುಲೈ 11 ರಂದು ನಗರದ ಸರಾಫ್ ಬಜಾರ್ ನ ಮಲಿಕ್ ಜುವೆಲ್೯ಸ್ ನಲ್ಲಿ ಘಟನೆ ನಡೆದಿತ್ತು.

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಪೋಲಿಸರ ಬಲೆಗೆ ಬಿದ್ದ ಕುಖ್ಯಾತ ದರೋಡೆಕೊರರು

ಒಟ್ಟು 2.86 ಕೆ.ಜಿ. ಚಿನ್ನ ಜಪ್ತಿ ಮಾಡಿಕೊಳ್ಳಲೋಗಿದೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಬಸಪ್ಪ ಎಸ್.ಡಿ. ಮಾಹಿತಿ ನೀಡಿದ್ದಾರೆ.

oppo_2
oppo_2

ಪ್ರಕರಣ ಭೇದಿಸಲು 5 ವಿಶೇಷ ತಂಡ ರಚನೆ ಮಾಡಲಾಗಿತ್ತು. ಚಿನ್ನದ ಅಂಗಡಿಯಲ್ಲಿ ಗನ್ ಹಚ್ಚಿ ಚಿನ್ನ ದರೋಡೆ ಮಾಡಲಾಗಿತ್ತು.

ಇದೀಗ ಪ್ರಕರಣ ಭೇಧಿಸಿದ ಪೋಲಿಸರ ತಂಡಕ್ಕೆ ನಗರ ಪೋಲಿಸ್ ಆಯುಕ್ತರಿಂದ ಪ್ರಶಂಸೆ ವ್ಯಕ್ತಪಡಿಸಿದರು. ಮೂವರ ಆರೋಪಿಗಳ ಬಂಧನ ಇನ್ನೂ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬಿಸಲಾಗಿದೆ.ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net