ಪೊಲೀಸರಿಂದ ತಪ್ಪಿಸಿಕೊಳ್ಳುವ ಭಯದಲ್ಲಿ ಸಿಕ್ಕಿಬಿದ್ದ ಖತರ್ನಾಖ್‌ ದರೋಡೆಕೋರರು

Robbers Arrested
Published on

ಭಟ್ಕಳ: ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಒಂದನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬೆಳಲ್ಕಂಡ ಗುಳ್ಮಿ ಬಳಿ ಬಂಧಿಸಿದ್ದಾರೆ.

ಭಟ್ಕಳ ಡಿವೈಎಸ್‌ಪಿ ಮಹೇಶ ನೇತೃತ್ವದಲ್ಲಿ ರಾತ್ರಿ ಗ್ರಾಮೀಣ ಠಾಣೆ ಪೊಲೀಸರು ಗಸ್ತು ನಡೆಸಿದ್ದರು. ಗುಳ್ಮಿ ಬಳಿ ಇನೋವಾ ಕಾರಿನಲ್ಲಿ ಬಂದವರು ಪೊಲೀಸರನ್ನು ನೋಡಿ ತಿರುಗಿಸಿಕೊಂಡು ವಾಪಸಾಗಲು ಯತ್ನಿಸಿದರು. ಆದರೆ, ಕಾರು ಪಲ್ಟಿಯಾಗಿತ್ತು. ಒಳಗಿದ್ದವರನ್ನು ಹಿಡಿದು ನೋಡಿದಾಗ ಕಾರಿನಲ್ಲಿ 2 ಚಾಕು, ಕಾರದಪುಡಿ, ಮಂಕಿ ಕ್ಯಾಪ್‌ಗಳು, ಚೀಲ, ತಾಡಪತ್ರಿ ಮುಂತಾದ ಸಾಮಗ್ರಿಗಳು ಪತ್ತೆಯಾಗಿದ್ದು, ದರೋಡೆ ನಡೆಸಲು ಯತ್ನಿಸುತ್ತಿರುವ ಅಂದಾಜಿನ ಮೇಲೆ ಅವರನ್ನು ಬಂಧಿಸಲಾಯಿತು.

ಮಂಗಳೂರು ಚೊಕ್ಕಬೆಟ್ಟು ರೋಡ್‌ನ ಜಲೀಲ್ ಹುಸೇನ್ ಪಿ.ಕೆ.ಸಯ್ಯದ್, ಭಟ್ಕಳ ಹೆಬಳೆಯ ನಾಸಿರ್ ಹಕೀಮ್ ಅಬ್ದುಲ್ ಮೊಹಿದ್ದೀನ್ ಖಾದರ್ ಹಾಗೂ ಒಬ್ಬ ಅಪ್ರಾಪ್ತ ಬಂಧಿತರು.  ಮುದ್ಗುಂ ಕಾಲನಿಯ ಜಿಶಾನ್ ಬಟ್ಟಾಗಾಂವ್‌ನ ನಬೀಲ್ ಎಂಬುವವರು ಪರಾರಿಯಾಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಚೊಕ್ಕಬೆಟ್ಟು ಮೂಲದ ಜಲೀಲ್‌ ಹುಸೇನ್‌ ಪ್ರಖ್ಯಾತ ಗರುಡಾ ಗ್ಯಾಂಗ್‌ನ ಸದಸ್ಯನಾಗಿದ್ದು, ಆತನ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ  11 ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net