ರೋಟರಿ ವತಿಯಿಂದ ಆಟಿಡೊಂಜಿ ದಿನ ಗಮ್ಮತ್

mng--10 Aug Rotary Ati
Published on

ಮಂಗಳೂರು: ಆಟಿ ಮಾಸಾಚರಣೆ ತುಳುನಾಡಿನ ಅತೀ ಸಿರಿವಂತ ಪುರಾತನ ಕಾಲದಿಂದ ಪೂರ್ವಜರು ಆಚರಿಸಿ ಬಂದ ಪರಂಪರೆಯ ಹಾಗೂ ಸಾಂಪ್ರದಾಯಿಕ ನಂಬಿಕೆಯುಳ್ಳ ಆಚರಣೆಯಾಗಿದ್ದು, ಅದರ ಉದ್ದೇಶ, ಮಹತ್ವ, ಆಚಾರ-ವಿಚಾರಗಳಿಗೆ ವೈಜ್ಞಾನಿಕ ಮಹತ್ವವಿದೆ ಎಂದು ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ರಾಜಗೋಪಾಲ್ ರೈ ಹೇಳಿದರು.


ರೋಟರಿ ಮಂಗಳೂರು ಸಿಟಿ ಸಂಸ್ಥೆ ಮತ್ತು ರೋಟರಿ ಮಂಗಳೂರು ಸೀ ಸೈಡ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮಂಗಳವಾರ ನಗರದ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಆಟಿಡೊಂಜಿ ದಿನ ಗಮ್ಮತ್ತ್ ಸಮಾರಂಭದಲ್ಲಿ ಮಾತನಾಡಿದರು.


ಸಿಟಿ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ರೈ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ.ರಂಜನ್ ಅತಿಥಿ ಪರಿಚಯ ನೀಡಿದರು. ಡಾ.ಭೂಷಣ್ ಶೆಟ್ಟಿ ಆರೋಗ್ಯ ಮತ್ತು ಆರೈಕೆ ಬಗ್ಗೆ ಉಪನ್ಯಾಸ ನೀಡಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಸಮಾಜ ಸೇವಾ ಯೋಜನೆಯ ಅಂಗವಾಗಿ ಅನುಕಂಪದ ಆಧಾರದ ಮೇಲೆ ನಗರದ ಯೆನೆಪೊಯ ಮಹಾವಿದ್ಯಾಲಯದಲ್ಲಿ ಅಂತಿಮ ಬಿಸಿಎ ಪದವಿ ವ್ಯಾಸಂಗ ಮಾಡುವ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿ ಪ್ರಿನ್ಸೆಸ್ ಶ್ರೇಯಾ ಬಕ್ಷ್ ಅವರಿಗೆ 15,000 ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ತಾಯಿ ಭಾರತಿ ಶೆಣೈ ಜೊತೆಗಿದ್ದರು. ಈ ವಿದ್ಯಾರ್ಥಿ ವೇತನವನ್ನು ಅನುಮೋದಿಸಲು ವಸಂತ ಮಲ್ಯರು ಸಹಕರಿಸಿದ್ದರು.


ಕಾರ್ಯದರ್ಶಿ ಆಚನ್ ಶೆಟ್ಟಿ ಮತ್ತು ಗಣೇಶ್ ಉಪಸ್ಥಿತರಿದ್ದರು. ಸೀ ಸೈಡ್ ಸಂಸ್ಥೆಯ ಅಧ್ಯಕ್ಷ ಶಿವರಾಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net