ಸುಡು ಸುಡು ಬಿಸಿಲಲ್ಲಿ ಪ್ರದಕ್ಷಿಣೆ

Roaming in the scorching sun
Roaming in the scorching sun
Published on

ಕಲಾದಗಿ: ನೆರಳಿನಿಂದ ಹೊರಗಡೆ ಅಡಿ ಇಟ್ಟರೆ ಸುಡು ಸುಡು ಬಿಸಿಲು ಎಲ್ಲರನ್ನೂ ಕಂಗೆಡೆಸುತ್ತಿದೆ. ಸಮೀಪದ ತುಳಸಿಗೇರಿ ಪ್ರಸಿದ್ಧ ಹನುಮಂತ ದೇವರ ದೇವಸ್ಥಾನದೊಳಗೆ ಅಡಿ ಇಡುವ ಭಕ್ತರನ್ನು ಸಹ ಅದು ಬಿಟ್ಟಿಲ್ಲ!

ದೇವಸ್ಥಾನದೊಳಗಿನ ಸುತ್ತಲಿನ ಅರ್ಧಪ್ರದೇಶದಲ್ಲಿ ನೆರಳಿನ ಆಸರೆ ಇಲ್ಲದೆ ಬಿಸಿಲಿಗೆ ತೆರೆದುಕೊಳ್ಳುತ್ತಿರುವುದರಿಂದ ಅದರ ನೆಲ ಕಾದು ಭಕ್ತರು ಪ್ರದಕ್ಷಿಣೆ ಹಾಕುವಾಗ ಕಾಲಿಗೆ ಬಿಸಿ ತಾಗಿ ಪರದಾಡುತ್ತಿದ್ದಾರೆ.

ಹರುಕು ನೆಲಹಾಸು: ದೇವಾಲಯದ ಒಳಭಾಗದ ಮುಂಭಾಗದಲ್ಲಿ ಮೇಲ್ಛಾವಣಿಯೇನೋ ಇದೆ. ಆದರೆ ಆದರ ಇನ್ನುಳಿದ ಅರ್ಧ ಭಾಗದಲ್ಲಿ ನೆರಳಿನ ಆಸರೆ ಇಲ್ಲದಿರುವುದೇ ಭಕ್ತರ ಈ ಪರದಾಟಕ್ಕೆ ಕಾರಣವಾಗಿದೆ. ಇಲ್ಲೆಲ್ಲ ಭಕ್ತರ ಪಾದ ಸುಡದಿರಲೆಂದು ಅದೆಷ್ಟೋ ವರ್ಷದ ಹಿಂದೆ ತಂದಿದ್ದ ಹರುಕು ಮುರುಕು ನೆಲಹಾಸು ಅಲ್ಲಲ್ಲಿ ಬಿದ್ದಿದೆಯಾದರೂ ಅದರಿಂದೇನೂ ಉಪಯೋಗವಾಗುತ್ತಿಲ್ಲ. ನೆಲಸುಡದಿರಲೆಂದು ವರ್ಷಗಳ ಹಿಂದೆ ಪ್ರದಕ್ಷಿಣೆ ದಾರಿಯಲ್ಲಿ ಬರೆಸಿರುವ ಬಿಳಿಯ ಬಣ್ಣದ ಪೇಂಟ್ ಮಾಸಿಹೋಗಿದೆ.

ಬೇಕಿದೆ ತುರ್ತು ವ್ಯವಸ್ಥೆ: ಭಕ್ತರು ಇನ್ನಷ್ಟು ತೊಂದರೆ ಪಡುವ ಮೊದಲೇ ಇಲ್ಲೆಲ್ಲ ನೆಲ ಸುಡದಿರುವಂಥಹ ವಿಶೇಷ ಬಣ್ಣ ಬಳಿಸುವ, ಇಲ್ಲವೆ ಉತ್ತಮ ನೆಲಹಾಸನ್ನು ಹಾಕಿಸುವ, ನೆರಳನ್ನು ಮಾಡುವ ತುರ್ತು ಸತ್ಕಾರ್ಯಕ್ಕೆ ದೇವಸ್ಥಾನದ ಆಡಳಿತಾಧಿಕಾರಿಗಳಾದ ಬಾಗಲಕೋಟ ತಹಸೀಲ್ದಾರರು ಮಾಡಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net