ರಸ್ತೆಬದಿ ಮೀನುಮಾರಾಟಕ್ಕೆ ಕಡಿವಾಣ

Fish Market Shifted
Published on

ಯಲ್ಲಾಪುರ: ಪಟ್ಟಣದ ಜೋಡುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 63 ಪಕ್ಕ ಯಾವುದೇ ನಡೆಯುತ್ತಿದ್ದ ಅಕ್ರಮ ಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಕಡಿವಾಣ ಹಾಕಿದೆ.

ಈ ಸಮಸ್ಯೆ ಕುರಿತು ’ವಿಜಯವಾಣಿ’ ಜೂ. 9ರಂದು ವರದಿ ಪ್ರಕಟಿಸಿದ ಬೆನ್ನಲ್ಲೆ ಪ.ಪಂ. ಮೀನು ಮಾರಾಟ ಮಾಡುತ್ತಿದ್ದ ಅಂಗಡಿಗಳ ತೆರವಿಗೆ ಕ್ರಮ ಕೈಗೊಂಡಿದೆ.

ಹೆದ್ದಾರಿ ಪಕ್ಕ ಜೋಡುಕೆರೆ ಬಳಿಯಲ್ಲಿ ಅಕ್ರಮವಾಗಿ ಮೀನು ಮಾರಾಟ ಮಾಡಲಾಗುತ್ತಿತ್ತು. ಇದರಿಂದ ವಾಹನ ಸಂಚಾರಕ್ಕೆ, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಮೀನು ಮಾರಾಟದಿಂದ ಈ ಪ್ರದೇಶ ಗಬ್ಬೆದ್ದು ನಾರುತ್ತಿತ್ತು. ಪಟ್ಟಣದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದ್ದಾಗ್ಯೂ ಹೆದ್ದಾರಿ ಬದಿ ಮೀನು ಮಾರಾಟದ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ವರ್ಷದಿಂದ ಆಗೀಗ ಬಂದಾದರೂ, ಮತ್ತೆ ಮತ್ತೆ ಮೀನು ವ್ಯಾಪಾರ ನಡೆಯುತ್ತಿತ್ತು. ಈ ಬಗ್ಗೆ ಜೂ.9 ರಂದು ವಿಜಯವಾಣಿ ವಿಸ್ತ್ರತ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಅವರು, ಪಪಂ ಆರೋಗ್ಯ ನಿರೀಕ್ಷಕ ಗುರು ಗಡಗಿ ಅವರಿಗೆ ಸೂಚನೆ ನೀಡಿ ಕಳುಹಿಸಿ ಮೀನು ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಖಾಯಂ ಆಗಿ ಇಲ್ಲಿ ಮೀನು ಮಾರಾಟ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಆಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net