

ಸಿಂಧನೂರು: ರಾಜ್ಯದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲವು ಸಾಧಿಸಿದ್ದು ಸರ್ಕಾರದ ಜನಪರ ಯೋಜನೆಗಳ ಜಾರಿಯಿಂದಲೇ ಈ ಜಯ ಸಿಕ್ಕಿದೆ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ವಿರೂಪಾಪುರ, ಅರಳಹಳ್ಳಿ, ಮಲ್ಲದಗುಡ್ಡ ಗ್ರಾಮದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳು ಜನರಿಗೆ ಹೆಚ್ಚಿನ ಅನುಕೂಲವಾಗಿವೆ. ಪ್ರತಿಪಕ್ಷವು ಸರ್ಕಾರದ ಬಗ್ಗೆ ಏನೇ ಹೇಳಿದರೂ, ಜನರಿಗೆ ಗೊತ್ತಿದೆ. ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಸಾಧ್ಯ. ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.90 ಪ್ರಮಾಣದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇನ್ನುಳಿದ ರಸ್ತೆಗಳು ಮುಂದಿನ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ವೆಂಕರಡ್ಡೆಪ್ಪ ಕಲ್ಪಟ್ಟಿ, ಸಿದ್ದಪ್ಪ ಬೇವಿನಗಿಡ, ಬಸವರಾಜ ಜಾಲಿಹಾಳ, ಸಿದ್ದನಗೌಡ ಮಲ್ಲಾಪುರ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬುಡ್ಡಪ್ಪ ಉದ್ಯಾಳ್, ದೇವರಾಜ ಕಪಗಲ್, ಹುಲುಗಪ್ಪ, ಶಿವರಾಜ ಇತರರು ಇದ್ದರು.