ಹೊಸಕೋಟೆಯಲ್ಲಿ ರಸ್ತೆಗಳು ಜಲಾವೃತ

21 05 2025_BNG_RURAL_PAGE_2
ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಖಾಸಗಿ ಕಂಪನಿ ಆಪ್ಟಿಕಲ್​ ೈಬರ್​ ಕೇಬಲ್​ ಅಳವಡಿಕೆಗೆ ಹೆದ್ದಾರಿ ಪಕ್ಕದಲ್ಲಿ ಗುಂಡಿ ತೋಡಿ ಮಣ್ಣನ್ನು ರಸ್ತೆಯಲ್ಲಿ ಹಾಕಿರುವುದು.
Published on

ಹೊಸಕೋಟೆ : ಒಂದು ವಾರದಿಂದ ಪ್ರತಿದಿನ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ. ನಗರದ ಹಲವು ರಸ್ತೆಗಳೂ ಸೇರಿ ತಾಲೂಕಿನ ಹಲವು ಭಾಗಗಳಲ್ಲಿ ರಸ್ತೆಗಳು ಹಾಳಾಗಿವೆ. ರಾಷ್ಟ್ರೀಯ ಹೆದ್ದಾರಿ 74 ರ ರಸ್ತೆ ಬದಿಯಲ್ಲಿ ಮಣ್ಣು ರಸ್ತೆಗೆ ಬಂದಿದ್ದು, ರಸ್ತೆಯ ಇಕ್ಕೆಲಗಳ ಕಸ ರಸ್ತೆ ಮೇಲೆ ತೇಲಾಡುತ್ತಿದೆ.

ನಗರ ಪ್ರದೇಶದ ಕೆಇಬಿ ವೃತ್ತದಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಮಳೆ ಬಂದ ಪ್ರತಿ ಬಾರಿಯೂ ಕೆರೆಯಂತಾಗಿ ರಸ್ತೆಯಲ್ಲಿ ಕನಿಷ್ಠ ಎರಡು ಅಡಿ ನೀರು ನಿಲ್ಲುತ್ತದೆ. ಇದರ ಜತೆ ನೀರಿನಲ್ಲಿ ಹಲವು ವಾಹನಗಳು ಸಿಲುಕಿ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಮಳೆಯ ಮಧ್ಯೆ ಖಾಸಗಿ ಸಂಸ್ಥೆಯೊಂದು ಹೊಸಕೊಟೆ ಸರ್ಜಾಪುರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಅನುಮತಿ ಇಲ್ಲದೆ ರಸ್ತೆ ಬದಿ ಆಪ್ಟಿಲಕ್​ ೈಬರ್​ ಕೇಬಲ್​ ಅಳವಡಿಸುತ್ತಿದ್ದು, ಅಗೆದ ಮಣ್ಣನ್ನು ಹೆದ್ದಾರಿಯಲ್ಲಿ ಹಾಕುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಬಾರಿ ದುಸ್ತರವಾಗಿದೆ, ಗಂಟೆ ಗಟ್ಟಲೆ ಟ್ರಾಫಿಕ್​ ಜಾಮ್​ ಜತೆಗೆ ಮಣ್ಣಿನಲ್ಲಿ ವಾಹನಗಳು ಹೂತುಕೊಳ್ಳುತ್ತಿವೆ. ಜೆಸಿಬಿ ಮೂಲಕ ವಾಹನಗಳನ್ನು ಹೊರತೆಗೆಯಲಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಾಗಲಿ, ಹೆದ್ದಾರಿ ಪ್ರಾಧಿಕಾರದವರಾಗಲಿ ಯಾರೂ ಸಹ ಗಮನ ಹರಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net