ಭಾರಿ ಮಳೆಗೆ ರಸ್ತೆಗಳು ಜಲಾವೃತ

KDR water
ಕಡೂರು ತುರುವನಹಳ್ಳಿ ಕಡೆ ಸಾಗುವ ಬೈಪಾಸ್ ರಸ್ತೆಯ ಕೆಳಸೇತುವೆ ಬಳಿ ಸಂಗ್ರಹವಾದ ನೀರಿನಲ್ಲಿ ಸಿಲುಕಿರುವ ವಾಹನ.
Published on

ಕಡೂರು: ತಾಲೂಕಿನಲ್ಲಿ ಶನಿವಾರ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಮಳೆ ರಭಸಕ್ಕೆ ರಸ್ತೆಗಳು ಜಲಾವೃತಗೊಂಡಿದ್ದವು. ತುರುವನಹಳ್ಳಿ ಮಾರ್ಗದೆಡೆಗೆ ಸಾಗುವ ದಾರಿಯಲ್ಲಿ ನಿರ್ಮಿಸಿರುವ ಬೈಪಾಸ್ ರಸ್ತೆಯ ಕೆಳಸೇತುವೆ ಬಳಿ ಎರಡು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದ್ದರಿಂದ ವಾಹನ ಸವಾರರು ಕೆಲ ಕಾಲ ಪರದಾಡಿದರು.

ಇನ್ನು ಕೆಲವೆಡೆ ತಗ್ಗು ಪ್ರದೇಶದ ಜಮೀನು, ತೋಟ ಜಲಾವೃತಗೊಂಡಿದ್ದವು.
ಪಟ್ಟಣದ ಚಂದ್ರಮೌಳೇಶ್ವರ ದೇವಾಲಯದ ಆವರಣದ ಬಳಿ ಶಿಥಿಲಗೊಂಡಿದ್ದ ಕಾಂಪೌಂಡ್ ಮಳೆ ರಭಸಕ್ಕೆ ಸಂಪೂರ್ಣ ಕುಸಿದಿದೆ. ಬೈಪಾಸ್ ರಸ್ತೆಯ ತಗ್ಗುಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾದ್ದರಿಂದ ಮಲ್ಲೇಶ್ವರ ಬಳಿಯ ಹಳ್ಳದ ಮಾರ್ಗದ ಕಾಲುವೆಗಳಿಗೆ ನೀರು ಸರಾಗವಾಗಿ ಹರಿಸಲಾಯಿತು. ಮಳೆಯಿಂದ ಜಮೀನು, ತೋಟಗಳಿಗೆ ಸಾಕಷ್ಟು ನೀರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net