ಗ್ರಾಮಗಳ ಅಭಿವೃದ್ಧಿಗೆ ರಸ್ತೆ ಅತ್ಯಗತ್ಯ

Roads are essential for village development
ಲೋಕಾಪುರ ಸಮೀಪದ ಬದನೂರ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಕೆಎಂಎ್ ನಿರ್ದೇಶಕ ಲಕ್ಷ್ಮಣ ಮಾಲಗಿ, ಸಂಜಯ ತಳೇವಾಡ, ವೆಂಕಣ್ಣ ಅಂಕಲಗಿ, ಲಕ್ಷ್ಮಣ ಸೊನ್ನದ ಮತ್ತಿತರರಿದ್ದಾರೆ.
Published on

ಲೋಕಾಪುರ: ರಸ್ತೆಗಳು ಸುಧಾರಣೆ ಆದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ಬದನೂರ ಗ್ರಾದಲ್ಲಿ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ರಾಹೆ-20 ರಿಂದ ಬದನೂರ-ಜುನ್ನೂರ ಜಿಲ್ಲಾ ಮುಖ್ಯ ರಸ್ತೆಯವರೆಗೆ 4 ಕಿ.ಮೀ ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆಗಳು ಉತ್ತಮವಾಗಿದ್ದರೆ ಮಾತ್ರ ರೈತರು ಹಾಗೂ ಸಾರ್ವಜನಿಕರು ವ್ಯವಹಾರ ಮತ್ತು ವಹಿವಾಟು ನಡೆಸಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ಭಾಗದ ಜನರಿಗೆ ಅನೂಕೂಲವಾಗಲೆಂದು ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿಯು ಗುಣಮಟ್ಟದಿಂದ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ತಿಳಿಸಿದ್ದೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಕೆಎಂಎ್ ನಿರ್ದೇಶಕ ಲಕ್ಷ್ಮಣ ಮಾಲಗಿ, ಸಂಜಯ ತಳೇವಾಡ, ವೆಂಕಣ್ಣ ಅಂಕಲಗಿ, ಲಕ್ಷ್ಮಣ ಸೊನ್ನದ, ಗಿರಿಯಪ್ಪ ಹುಡೇದ, ಹಣಮಂತ ಅಮ್ಮಲಝರಿ, ಸುಭಾಸ ಚಿತ್ತರಗಿ, ಲಕ್ಷ್ಮಣ ನಾಯಕ, ಮಾನಿಂಗಪ್ಪ ಹುಂಡೇಕಾರ, ಇಒ ಉಮೇಶ ಸಿದ್ನಾಳ, ಚನ್ನಬಸವ ಮಾಚಕನೂರ, ಅಶೋಕ ಕ್ಯಾದಿಗೇರಿ ಗ್ರಾಪಂ ಕಾರ್ಯದರ್ಶಿ ಬಸವರಾಜ ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net