

ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸೇವೆಗಳನ್ನು ಮರುನಿಗದಿ, ನಿಯಂತ್ರಣ ಮತ್ತು ಭಾಗಶಃ ರದ್ದು ಹಾಗೂ ರದ್ದುಪಡಿಸಲಾಗಿದೆ.
ರೈಲು ಸಂಖ್ಯೆ 16552 ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ 40 ನಿಮಿಷ ತಡವಾಗಿ ಹಾಗೂ ರೈಲು ಸಂಖ್ಯೆ 66554 ಕೆಎಸ್‌ಆರ್ ಬೆಂಗಳೂರು ಮೆಮೂ 45 ನಿಮಿಷ ತಡವಾಗಿ ಅ.29, 31, ನ.19, 21, 26, 28, ಡಿ.17, 19 ರಂದು ಅಶೋಕಪುರಂನಿಂದ 40 ನಿಮಿಷ ತಡವಾಗಿ ಹೊರಡಲಿದೆ.
ರೈಲು ಸಂಖ್ಯೆ 16586 ಮುರುಡೇಶ್ವರ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 90 ನಿಮಿಷಗಳ ಕಾಲ, ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು ಮೈಸೂರು ಪ್ಯಾಸೆಂಜರ್ 100 ನಿಮಿಷಗಳ ಕಾಲ ಅ.28, 30, ನ.18, 20, 25, 27, ಡಿ.16, 18 ರಂದು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ. ಅದೇ ರೀತಿ ರೈಲು ಸಂಖ್ಯೆ 66579 ಕೆಎಸ್‌ಆರ್ ಬೆಂಗಳೂರು ಅಶೋಕಪುರಂ ಮೆಮೂ ಅ. 29, 31, ನ.19, 21, 26, 28, ಡಿ. 17, 19 ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
ರೈಲು ಸಂಖ್ಯೆ 66579 ಕೆಎಸ್‌ಆರ್ ಬೆಂಗಳೂರು ಅಶೋಕಪುರಂ ಮೆಮೂ ಅ.29, 31, ನ.19, 21, 26, 28, ಡಿ.17, 19 ರಂದು ಪಾಂಡವಪುರ ಅಶೋಕಪುರಂ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಪಾಂಡವಪುರದಲ್ಲೇ ಅಂತ್ಯಗೊಳ್ಳುತ್ತದೆ. ರೈಲು ಸಂಖ್ಯೆ 66554 ಅಶೋಕಪುರಂ ಕೆಎಸ್‌ಆರ್ ಬೆಂಗಳೂರು ಮೆಮೂ ಅ.29, 31, ನ.19, 21, 26, 28, ಡಿ.17, 19 ರಂದು ಅಶೋಕಪುರಂ ಪಾಂಡವಪುರ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ನಿಗದಿತ ಸಮಯದಂತೆ ಅಶೋಕಪುರಂ ಬದಲು ಪಾಂಡವಪುರದಿಂದ ಹೊರಡುತ್ತದೆ.
ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಈ ಕೆಳಗಿನ ವಿಶೇಷ ರೈಲು ಸೇವೆಗಳನ್ನು ವಿವಿಧ ದಿನಗಳಂದು ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 06239 ಮೈಸೂರು-ತಿರುನೆಲ್ವೇಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.27 ರಿಂದ ನ.24ರವರೆಗೆ ಸೋಮವಾರದಂದು, ರೈಲು ಸಂಖ್ಯೆ 06240 ತಿರುನೆಲ್ವೇಲಿ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ.28 ರಿಂದ ನ.25ರವರೆಗೆ ಮಂಗಳವಾರದಂದು, ರೈಲು ಸಂಖ್ಯೆ 06243 ಮೈಸೂರು-ಕರಾಯಿಕ್ಕುಡಿ ಎಕ್ಸ್‌ಪ್ರೆಸ್ ವಿಶೇಷ ರೈಲುಅನ್ನು ಅ.30 ರಿಂದ ನ.29ರವರೆಗೆ ಗುರುವಾರ ಮತ್ತು ಶನಿವಾರದಂದು ರದ್ದುಗೊಳಿಸಲಾಗಿದೆ.
ಅದೇ ರೀತಿ ರೈಲು ಸಂಖ್ಯೆ 06244 ಕಾರೈಕ್ಕುಡಿ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಅ.31 ರಿಂದ ನ.30ರವರೆಗೆ ಶುಕ್ರವಾರ ಮತ್ತು ಭಾನುವಾರದಂದು, ರೈಲು ಸಂಖ್ಯೆ. 06237 ಮೈಸೂರು-ರಾಮನಾಥಪುರಂ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.27 ರಂದು, ರೈಲು ಸಂಖ್ಯೆ 06238 ರಾಮನಾಥಪುರಂ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ.28 ರಂದು ಸಂಚಾರ ರದ್ದಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.