

ಹಟ್ಟಿಚಿನ್ನದಗಣಿ: ಸಮೀಪದ ಮೇದಿನಾಪುರ ಗ್ರಾಮದ 2ನೇ ವಾರ್ಡ್ನಲ್ಲಿ ಸಿಸಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಜನರು ಪರದಾಡುವಂತಾಗಿದೆ. ಸಿಸಿ ರಸ್ತೆ ನಿರ್ಮಾಣಕ್ಕಾಗಿ ಮರಂ ಹಾಕಿ ಹಲವಾರು ತಿಂಗಳುಗಳೇ ಆಗಿದ್ದು, ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಂಡಿಲ್ಲ. ವಾರ್ಡ್ನ ಸದಸ್ಯರ ಮನೆ ಮುಂದೆ ಮಾತ್ರ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ನಮ್ಮ ಮನೆ ಮುಂದೆ ರಸ್ತೆ ನಿರ್ಮಿಸದೆ ತಾರತಮ್ಯವೆಸಗಲಾಗಿದೆ. ಮಳೆ ಬಂದಾಗ ರಸ್ತೆಯಲ್ಲಿನ ನೀರು ಮನೆಯೊಳಗೆ ಹರಿಯುತ್ತಿದ್ದು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಕೂಡಲೇ ರಸ್ತೆ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಎಂದು ನಿವಾಸಿಗಳಾದ ಲಕ್ಷ್ಮೀಬಾಯಿ, ನಾಗಮ್ಮ, ಸುಜಾತಾ ಆಗ್ರಹಿಸಿದ್ದಾರೆ.