ಮೂಲ ಸೌಕರ್ಯ ಒದಗಿಸಲು ಶ್ರಮಿಸಿ, ಶಾಸಕ ಮಹೇಶ ಟೆಂಗಿನಕಾಯಿ ಸೂಚನೆ

Published on

ಹುಬ್ಬಳ್ಳಿ: ನಗರದ ವಾರ್ಡ್ ನಂ. 37ರ ಲಿಂಗರಾಜನಗರ ಶಿವಭೂಮಿ ಅಪಾರ್ಟ್ ಮೆಂಟ್ ಬಳಿ ಒಳಚರಂಡಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಭಾನುವಾರ ಚಾಲನೆ ನೀಡಿದರು.

ರಸ್ತೆ ಕೆಲಸಗಳನ್ನು ಶೀಘ್ರ ರ್ಪೂಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಕ್ಷೇತ್ರ ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲಿ ಮೂಲ ಸೌಕರ್ಯಗಳು ಅಭಿವೃದ್ಧಿಯಾಗಬೇಕು. ಈ ಬಗ್ಗೆ ಏನೇ ಸಮಸ್ಯೆ ಇದ್ದರೂ ಅಧಿಕಾರಿಗಳು ಪರಿಹರಿಸಿ ಕಾಮಗಾರಿ ಮುಂದುವರಿಸಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಟೆಂಗಿನಕಾಯಿ ಹೇಳಿದರು.

ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಪ್ರಮುಖರಾದ ಗುರುಶಾಂತ ವಳಸಂಗ, ಸೋಮು ಪಾಟೀಲ್, ಎಂ.ಡಿ. ಮೆಣಸಿನಕಾಯಿ, ಜಿ.ಎಸ್. ಹಿರೇಮಠ, ಪ್ರದಿಪ ಜಗಮಾನಿ, ಸುಚೀತ ಅಂಗಡಿ, ಶಿವಕುಮಾರ ಪೊಲೀಸಪಾಟೀಲ್, ಅಶೋಕ ಅಕ್ಕಿ, ಕಲ್ಲನಗೌಡ ಮಾಲಿಪಾಟೀಲ, ಬಸವರಾಜ ಅಂಗಡಿ, ರಾಮನಗೌಡ ಶೆಟ್ಟೆಗೌಡರ, ಅರವಿಂದ ಕಾಮತ್, ಐ.ಎಸ್. ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net