ರಸ್ತೆ ಕಾಮಗಾರಿ ಕಳಪೆ, ಪರಿಶೀಲನೆಗೆ ಆಗ್ರಹ

210520 Kushtagi Hyka Rakshana Vedike Appeal
Published on

ಕುಷ್ಟಗಿ: ಚಿಕ್ಕ ಹೆಸರೂರು-ಮುಂಡರಗಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳಪೆಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುಣಮಟ್ಟದ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಲೋಕೋಪಯೋಗಿ ಇಲಾಖೆಯ ಎಇಇ ಎಚ್.ಬಿ.ಕಂಠಿಗೆ ಹೈ.ಕ.ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.

ಪಟ್ಟಣ ಸೇರಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಸಹ ಕಳಪೆಯಾಗಿದ್ದು, ಸೂಕ್ತ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷ ಬಸವರಾಜ ಗಾಣಿಗೇರ, ಜಿಲ್ಲಾ ಸಂಚಾಲಕ ನಾಗರಾಜ ಭೋವಿ, ತಾಲೂಕು ಅಧ್ಯಕ್ಷ ಮಂಜುನಾಥ ತಳುವಗೇರಾ, ಉಪಾಧ್ಯಕ್ಷ ಪರಶುರಾಮ ಬೋದೂರು, ಸದಸ್ಯರಾದ ವೀರೇಶ ತಿಮ್ಮಾಪುರ, ರಾಘವೇಂದ್ರ ಕುಲಕರ್ಣಿ, ಕೃಷ್ಣಪ್ಪ ಭೋವಿ, ದಾವಲದಸಾಬ ಬಂಗ್ಲೇದಾರ್, ಪ್ರಮೋದ ಬಡಿಗೇರ ಇತರರುಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net