ರಸ್ತೆ ಕಾಮಗಾರಿ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಮನವಿ

6-msk-2
ಮಸ್ಕಿಯಲ್ಲಿ ಚರಂಡಿ ಹಾಗೂ ವಿಭಜಕ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಅಶೋಕ ಮುರಾರಿ, ಎಇಇ ಸೋಮನಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಆರ್.ಕೆ.ನಾಯಕ, ದುರುಗರಾಜ ವಟಗಲ್, ಕಿರಣ ಮುರಾರಿ, ವಿಜಯ ಬಡಿಗೇರ, ಸಿದ್ದು ಮುರಾರಿ, ಬಸವರಾಜ ಉದ್ಬಾಳ, ಮಲ್ಲಿಕ್ ಕೊಠಾರಿ ಇದ್ದರು.
Published on

ಮಸ್ಕಿ: ಪಟ್ಟಣದಲ್ಲಿ ನಡೆಯುತ್ತಿರುವ ಚರಂಡಿ ಹಾಗೂ ವಿಭಜಕ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕೂಡಲೇ ಕೆಲಸ ನಿಲ್ಲಿಸಿ ಬಿಲ್ ಪಾವತಿ ತಡೆಯಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನಗುಂದ ವಿಭಾಗದ ಎಇಇ ಸೋಮನಗೌಡ ಮನವಿ ಸಲ್ಲಿಸಲಾಯಿತು.

ಕಳೆದ ಕೆಲ ದಿನಗಳಿಂದ ಮಸ್ಕಿ ಪಟ್ಟಣದಲ್ಲಿ ಆರಂಭವಾಗಿರುವ ರಸ್ತೆ ವಿಭಜಕ ಮತ್ತು ಚರಂಡಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ. ಕೋಟ್ಯಾಂತರ ರೂ. ಕಾಮಾಗಾರಿಯನ್ನು ಅಂದಾಜು ಪಟ್ಟಿ ಪ್ರಕಾರ ಮಾಡದೆ ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಘಟನೆ ಮುಖಂಡರು ಆರೋಪಿಸಿದರು.

ಕಡಿಮೆ ಗುಣಮಟ್ಟದ ಸಿಮೆಂಟ್, ಕಡಿಮೆ ಸಾಮರ್ಥ್ಯದ ಕಬ್ಬಿಣಗಳನ್ನು ಬಳಸಿ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಇದುವರೆಗೂ ಸ್ಪಂದಿಸಿಲ್ಲ.

ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಕಾಮಗಾರಿಯ ಗುಣಮಟ್ಟದಿಂದ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಅಶೋಕ ಮುರಾರಿ, ಆರ್.ಕೆ.ನಾಯಕ, ದುರುಗರಾಜ ವಟಗಲ್, ಸಿದ್ದು ಮುರಾರಿ,ಮಲ್ಲಿಕ್ ಕೊಠಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net