ರಸ್ತೆ ಕಾಮಗಾರಿ ಸರಿಪಡಿಸುವಂತೆ ಪ್ರತಿಭಟನೆ

3
ಮುರಗೋಡ ಗ್ರಾಮಸ್ಥರು ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಉಪತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ ಅವರಿಗೆ ಮನವಿ ಸಲ್ಲಿಸಿದರು. ಮಹಾಂತೇಶ ಬಡಿಗೇರ, ಪ್ರವೀಣ ಸನ್ನಿಂಗಪ್ಪನವರ, ಬಸವರಾಜು ಹೂಗಾರ ಇತರರಿದ್ದರು.
Published on

ಮುರಗೋಡ: ಸುತ್ತಲಿನ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕಾಮಗಾರಿ ಹಾಗೂ ಅರ್ಧಕ್ಕೆ ಬಿಟ್ಟಿರುವ ರಸ್ತೆ ಕೆಲಸ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಕಾರ್ಮಿಕ ಸಂಘಟನೆ ಮುಖಂಡ ಮಹಾಂತೇಶ ಬಡಿಗೇರ ನೇತೃತ್ವದಲ್ಲಿ ಬುಧವಾರ ಗ್ರಾಮದ ಬಸ್ ನಿಲ್ದಾಣ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಮಹಾಂತೇಶ ಬಡಿಗೇರ ಮಾತನಾಡಿ, ಸುತ್ತಲಿನ ಬೈಲಹೊಂಗಲ ಮತ್ತು ಹಲಕಿ ಕ್ರಾಸ್ ರಸ್ತೆ ಕಾಮಗಾರಿ ಕಳಪೆ ಆಗಿರುವುದರಿಂದ ಪದೇ ಪದೆ ಅಪಘಾತವಾಗಿ ಪ್ರಯಾಣಿಕರು ತೂಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಂಪ್ ನಿರ್ಮಿಸಿದ ಕಾರಣ ಬೈಕ್‌ನಿಂದ್ ಬಿದ್ದು ಮುರಗೋಡ ಯುವಕನೊಬ್ಬ ಮೃತಪಟ್ಟಿದ್ದಾನೆ.

ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಬೇಕು ಮತ್ತು ಸೊಗಲ ರಸ್ತೆ ಕಾಮಗಾರಿ ಕೆಲಸ ತ್ವರಿತವಾಗಿ ಮಾಡಬೇಕೆಂದು ಅಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಉಪತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರವೀಣ ಸನ್ನಿಂಗಪ್ಪನವರ, ಬಸವರಾಜು ಹೂಗಾರ, ಕಿರಣ ಬಡಿಗೇರ, ಮಹೇಶ ಹುಡೇದ, ಕಾರ್ತಿಕ ಪಾಟೀಲ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net