ರಸ್ತೆ ಕಾಮಗಾರಿಗೆ ಭೂಮಿಪೂಜೆ

4545444444
Published on

ಹಿರೇಬಾಗೇವಾಡಿ: ಸಮೀಪದ ಹುಲಿಕಟ್ಟಿ ಜನತಾ ಬಡಾವಣೆಯಿಂದ ಹಿರೇಬಾಗೇವಾಡಿಯ ಬಸವೇಶ್ವರ ವೃತ್ತ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬುಧವಾರ ಭೂಮಿಪೂಜೆ ನೆರವೇರಿಸಿದರು.

ವಿಠ್ಠಲ-ರುಕ್ಮಿಣಿ ದೇವಸ್ಥಾನಕ್ಕಾಗಿ ಮಂಜೂರಾದ 3 ಲಕ್ಷ ರೂ. ಅನುದಾನದ ಪೈಕಿ ಮೊದಲ ಕಂತಾಗಿ 1 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ, ಸುರೇಶ ಇಟಗಿ, ಆನಂದಗೌಡ ಪಾಟೀಲ, ಅಡಿವೇಶ ಇಟಗಿ, ಶ್ರೀಕಾಂತ ಮಾದುಭರಮಣ್ಣವರ, ಅನಿಲ ಪಾಟೀಲ, ಬಸನಗೌಡ ಪಾಟೀಲ,ಸಿದ್ಧನಗೌಡ ಪಾಟೀಲ, ಬಿ.ಜಿ. ವಾಲಿ ಇಟಗಿ, ಗೌಸಮೋದ್ದೀನ್ ಜಾಲಿಕೊಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net