ರಸ್ತೆ ಕಾಮಗಾರಿ ತನಿಖೆ ನಡೆಸಲಿ

16-msk-1
ಮೌನೇಶ ರಾಥೋಡ
Published on

ಮಸ್ಕಿ: ತಾಲೂಕಿನ ತಲೇಖಾನ್ ಗ್ರಾಪಂ ವ್ಯಾಪ್ತಿಯ ಯರದೊಡ್ಡಿ, ಹಡಗಲಿ ರಾಮಪ್ಪನ ತಾಂಡಾದಲ್ಲಿ ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿದೆ. ಈ ಕುರಿತು ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳು ಸುಳ್ಳು ಪ್ರಕರಣ ದಾಖಲಿಸಿ,

ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿರುವುದು ಸರಿಯಲ್ಲ ಎಂದು ತಲೇಖಾನ್ ಗ್ರಾಪಂ ಸದಸ್ಯ ಮೌನೇಶ ರಾಥೋಡ ಹಾಗೂ ಶ್ರೀನಿವಾಸ ಚವ್ಹಾಣ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಕಾಮಗಾರಿ ಅಂದಾಜು ಪಟ್ಟಿಯಂತೆ ರಸ್ತೆ ನಿರ್ಮಿಸುತ್ತಿಲ್ಲವೆಂದು ಕೇಳಿದ್ದಕ್ಕೆ ನಿರ್ಮಿತಿ ಕೇಂದ್ರದ ಅಧಿಕಾರಿ ಸಂತೋಷ್ ಅವರು ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ನಿರ್ಮಿತಿ ಕೇಂದ್ರದಿಂದ ನಡೆದಿರುವ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅಗ್ರಹಿಸಿದರು. ಪ್ರಮುಖರಾದ ಆನಂದ ಕುಮಾರ್, ಶಂಕ್ರಪ್ಪ ಯರದೊಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net