ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿ

23RACHU05
ರಾಯಚೂರು ಡಿಸಿ ಕಚೇರಿ ಗ್ರೇಡ್-2 ತಹಸೀಲ್ದಾರ ಪರಶುರಾಮಗೆ ಅಖಿಲ ಭಾರತ ಡಾ ಬಿ.ಆರ್.ಅಂಬೇಡ್ಕರ್ ಸೈನ್ಯ ವಿಭಾಗೀಯ ಸಮಿತಿ ಮನವಿ ಸಲ್ಲಿಸಿತು. ವಿಭಾಗೀಯ ಅಧ್ಯಕ್ಷ ಹನುಮಂತ, ಪ್ರಮುಖರಾದ ಅನ್ವರ್, ಜಾವೀದ್, ಶಫಿ, ಅಜ್ಜು, ಜಲಾಲ್ ಬಾಬಾ ಇದ್ದರು.
Published on

ರಾಯಚೂರು: ನಗರದ ಚಂದ್ರಬಂಡಾ ರಸ್ತೆ ಕಾಮಗಾರಿ ಪೂರ್ಣಗಳಿಸಲು ಒತ್ತಾಯಿಸಿ ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೈನ್ಯ ವಿಭಾಗೀಯ ಸಮಿತಿ ನಗರದ ಡಿಸಿ ಕಚೇರಿ ಗ್ರೇಡ್-2 ತಹಸೀಲ್ದಾರ್ ಪರಶುರಾಮಗೆ ಸೋಮವಾರ ಮನವಿ ಸಲ್ಲಿಸಿತು.

ರಸ್ತೆ ಕಾಮಗಾರಿ ಪ್ರಾರಂಭಗೊಳಿಸಿ ಮೂರು ವರ್ಷ ಕಳೆದರೂ ಇದುವರೆಗೆ ಪೂರ್ಣಗೊಂಡಿಲ್ಲ. ಚರಂಡಿ ಕಾಲುವೆ ಸಹ ಪೂರ್ಣಗೊಳಿಸದೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದ ವಾಹನ ದಟ್ಟನೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಗುತ್ತಿಗೆದಾರ ಸ್ಪಂದಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ರಸ್ತೆ ಕಾಮಗಾರಿ ಪ್ರಾರಂಭದಿಂದ ಕೇವಲ ಸಿ.ಸಿ.ರಸ್ತೆ ಮಾತ್ರ ಹಾಕಲಾಗಿದೆ. ಅದರ ಬದುವಿಗೆ ಮೊರಂ ತುಂಬದೇ ಹಾಗೆ ಬಿಟ್ಟಿದ್ದರಿಂದ ಪಕ್ಕದ 3-4 ಅಡಿ ಇರುವ ರಸ್ತೆ ಕಾಣುವುದಿಲ್ಲ. ರಸ್ತೆ ತಗ್ಗುಗಳಿದ್ದು ಎಲ್ಲಿಯೂ ಎಚ್ಚರಿಕೆ ನಾಮಫಲಕ ಹಾಕಲಾಗಿಲ್ಲ.

ಇದ್ದರಿಂದ ಅಪಘಾತಗಳು ನಡೆಯುತ್ತಿವೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿದರು. ವಿಭಾಗೀಯ ಅಧ್ಯಕ್ಷ ಹನುಮಂತ, ಪ್ರಮುಖರಾದ ಅನ್ವರ್, ಜಾವೀದ್, ಶಫಿ, ಅಜ್ಜು, ಜಲಾಲ್ ಬಾಬಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net