1.55 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ

Untitled-3
ಹೊಸಕೋಟೆ ತಾಲೂಕಿನ ನಾರಾಯಣಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು. ದೇವನಗುಂದು ಗ್ರಾಪಂ ಅಧ್ಯಕ್ಷ ರತ್ನಾ ಗೋವಿಂದರಾಜು, ಕಲ್ಕುಂಟೆ ಅಗ್ರಹಾರ ಗ್ರಾಪಂ ಅಧ್ಯೆ ಚೈತ್ರಾ, ಬಮುಲ್​ ಉಪಾಧ್ಯಕ್ಷ ಕೆಎಂಎಂ.ಮಂಜುನಾಥ್​, ಮುಖಂಡರಾದ ಭೋದನಹೊಸಳ್ಳಿ ಪ್ರಕಾಶ್​, ಆರೋಹಳ್ಳಿ ದೇವರಾಜ್​, ಮುತ್ಕೂರು ಮುನಿರಾಜ್​, ನಾರಾಯಣಕೆರೆ ಪುಟ್ಟರಾಜ್​, ಆನಂದ ಆಚಾರಿ, ಹಲವು ಮುಖಂಡರು ಇದ್ದರು.
Published on

ಹೊಸಕೋಟೆ : ಅನುಗೊಂಡನಹಳ್ಳಿ ಹೋಬಳಿಯ 8 ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನ ಹಾಗೂ ಎಸ್​ಸಿಪಿ, ಟಿಎಸ್​ಪಿ ಯೋಜನೆಯಡಿ 1.55 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಾಸಕ ಶರತ್​ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.

ದುನ್ನಸಂದ್ರಕ್ಕೆ 20 ಲಕ್ಷ ರೂಪಾಯಿ, ಡಿ.ಹೊಸಹಳ್ಳಿಗೆ 15 ಲಕ್ಷ ರೂಪಾಯಿ, ಲಿಂಗಧೀರಮಲ್ಲಸಂದ್ರಕ್ಕೆ 15 ಲಕ್ಷ ರೂಪಾಯಿ, ಸೋಮಲಾಪುರ ಹಂದೇನಹಳ್ಳಿಗೆ 20ಲಕ್ಷ ರೂಪಾಯಿ, ಅರೇಹಳ್ಳಿಗೆ 10ಲಕ್ಷ ರೂಪಾಯಿ, ಕಲ್ಕುಂಟೆಗೆ 30 ಲಕ್ಷ ರೂಪಾಯಿ, ಅಗ್ರಹಾರ ಹಾಗೂ ನಾರಾಯಣ ಕೆರೆ ಗ್ರಾಮದಲ್ಲಿ 30 ಲಕ್ಷ ರೂಪಾಯಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಜಿಲ್ಲೆ ಹೆಸರು ಬದಲಾವಣೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದಿನೇದಿನೆ ಗ್ರಾಮಾಂತರ ರೂಪ ಕಳೆದುಕೊಂಡು ಬರುತಿದೆ. ರಾಮನಗರವನ್ನು ಮೊದಲು ಬೆಂಗಳೂರು ಗ್ರಾಮಾಂತರ ಎಂದೇ ಕರೆಯಲಾಗುತ್ತಿತ್ತು. ಈಗ ಬೆಂಗಳೂರು ದಣ ಎಂದು ನಾಮಕರಣವಾದ ಮೇಲೆ ಗ್ರಾಮಾಂತರವನ್ನೂ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲು ರ್ನಿಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಎಲ್ಲ ಶಾಸಕರು ಹಾಗೂ ರಾಜ್ಯ ನಾಯಕರು ಮಾತನಾಡುವ ವಿಚಾರವಲ್ಲ. ಕೇಂದ್ರದ ವರಿಷ್ಠರು ಕೈಗೊಳ್ಳುವ ನಿರ್ಧಾರವಾಗಿದ್ದು, ಅದೇ ಅಂತಿಮವಾಗಿದೆ. ಹೈಕಮಾಂಡ್​ ಆದೇಶಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. > ಶರತ್​ ಬಚ್ಚೇಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net