ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

22 CRP-2A
Published on

ಚನ್ನರಾಯಪಟ್ಟಣ: ಪಟ್ಟಣ ವಿಸ್ತಾರವಾಗಿ ಬೆಳೆಯುತ್ತಿದ್ದು, ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಭೂಮಿಯ ಮೌಲ್ಯವೂ ಹೆಚ್ಚಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಕಸಬಾ ಹೋಬಳಿ ಗುಂಡಶೆಟ್ಟಿಹಳ್ಳಿಯಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಯೋಜನೆಯ ಮೂಲಕ ಭೂ ಸೇನಾ ನಿಗಮದ ಅನುದಾನದಲ್ಲಿ ನುಗ್ಗೆಹಳ್ಳಿ -ಗುಂಡ ಶೆಟ್ಟಿಹಳ್ಳಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಪ್ರಗತಿಯಾಗುತ್ತದೆ. ಹಾಗಾಗಿ ತಾಲೂಕಿನ ಮುಖ್ಯರಸ್ತೆಗಳು ಸೇರಿದಂತೆ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ನೀಡಲಾಗಿದೆ ಎಂದರು. ಕಾಮಗಾರಿ ನಿರ್ವಹಿಸುತ್ತಿರುವ ಇಂಜಿನಿಯರ್ ಮತ್ತು ಗುತ್ತಿಗೆದಾರರು ಗುಣಮಟ್ಟ ಪಾಲನೆಗೆ ಗಮನ ನೀಡಬೇಕು ಎಂದವರು ಸೂಚಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಜಿ.ಆರ್. ಸುರೇಶ್, ಸ್ಥಳೀಯ ಮುಖಂಡರಾದ ರಂಗೇಗೌಡ, ಕಾಂತರಾಜು, ಜಿ.ಎಂ.ಕಿರಣ್ ರಾಜು, ಶಿವು, ಜಯರಾಮು, ರಾಜಣ್ಣ, ದೇವರಾಜು, ರಾಘು, ಜಗಣ್ಣ, ಯುವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net