

ಕುಳಗೇರಿ ಕ್ರಾಸ್ : ಕಳೆದ ವರ್ಷವಷ್ಟೇ ಕೋಟಿ ರೂ. ಅನುದಾನ ಬಳಸಿ ನಿರ್ಮಿಸಲಾಗಿದ್ದ ಮಲಪ್ರಭಾ ನದಿಯ ಹಳೆ ಸೇತುವೆ ಪ್ರವಾಹದ ನೀರಿಗೆ ಕಿತ್ತು ಹೋಗಿದ್ದು, ಅಪಾಯಕಾರಿ ರಸ್ತೆಯಲ್ಲಿಯೇ ಜನತೆ ವಾಹನ ಸಂಚಾರ ನಡೆಸುತ್ತಿದ್ದಾರೆ.
ಸದ್ಯ ಮಲಪ್ರಭಾ ಪ್ರವಾಹ ಇಳಿಮುಖವಾಗಿದ್ದು, ರಸ್ತೆಯ ಸ್ಥಿತಿ ನೂರಾರು ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಯಂತಾಗಿದೆ. ಇದನ್ನು ಅವಲೋಕಿಸಿದರೆ ರಸ್ತೆ ಎಷ್ಟು ಕಳಪೆ ಗುಣಮಟ್ಟದಲ್ಲಿತ್ತು ಎಂಬುದು ಮನವರಿಕೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯನ್ನು ಅವಲೋಕಿಸಿ ಕಾಮಗಾರಿ ನಡೆಸಿದ ಗುತ್ತಿಗೆದಾರನಿಂದಲೇ ಮತ್ತೆ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.