ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲಿಸಿ

Tlk 28-3
Published on

ತಾಳಿಕೋಟೆ: ಪಟ್ಟಣದ ಎಸ್.ಕೆ. ಪದವಿ ಮಹಾವಿದ್ಯಾಲಯದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ವೈಆರ್‌ಸಿ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ 33ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಗುರುವಾರ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಿಎಸ್‌ಐ ಶಿವಾಜಿ ಪವಾರ ಮಾತನಾಡಿ, ಕಡ್ಡಾಯವಾಗಿ ವಾಹನ ಸವಾರರು ನಿಯಮಗಳನ್ನು ಪಾಲಿಸಬೇಕು ಎಂದ ಅವರು, ಸರ್ಕಾರ ಜಾರಿಗೆ ತಂದ 112 ತುರ್ತು ಸೇವೆ ಮಾಹಿತಿ ನೀಡಿದರು. ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಎಸ್.ಅಲಾಳಮಠ, ಡಾ.ಅಶೋಕ ರಾಠೋಡ, ಪ್ರೊ.ರಾಘವೇಂದ್ರ ಮಿಸ್ಕಿನ, ವಿ.ಸಿ. ಕೋಟ್ಯಾಳ, ಮಂಜುನಾಥ ಮ್ಯಾಗೇಡಿ, ಪೊಲೀಸ್ ಸಿಬ್ಬಂದಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net