ರೈಲ್ವೆ ಹಳಿ ಬಳಿ ರಸ್ತೆ ಸರ್ವೇ, ಎರಡು ಇಲಾಖೆಗಳ ಹಗ್ಗಜಗ್ಗಾಟ

IMG-20250306-WA0025.jpg
Published on

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಮಾರ್ಗದ ರಸ್ತೆಯ ವಿಸ್ತರಣೆಯ ನಡುವೆ ರೈಲ್ವೆ ಇಲಾಖೆಯ ಅಧಿಕಾರಿಗಳು ಸಹ ಸರ್ವೇ ಕಾರ್ಯ ಕೈಗೊಂಡಿದ್ದು ಎರಡು ಇಲಾಖೆಗಳ ಹಗ್ಗಜಗ್ಗಾಟ ಮುಂದುವರೆದಿದೆ.
ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆಯಿಂದ ಹಾದು ಹೋಗಿರುವ ರೈಲ್ವೆ ಹಳಿಯ ಪಕ್ಕದಲ್ಲಿಯೇ ಹೆದ್ದಾರಿ ೬೯ ರಸ್ತೆ ಇದೆ. ಇದರ ನಡುವೆ ಪ್ರಾಧಿಕಾರವು ರಸ್ತೆಯ ವಿಸ್ತರಣೆ ಕಾರ್ಯ ಕೈಗೊಳ್ಳುತ್ತಿದೆ. ಇದರ ಜಾಗವು ನಮಗೆ ಸೇರಿದ್ದು ಎಂಬುದಾಗಿ ರೈಲ್ವೆ ಇಲಾಖೆ ವಾದಿಸುತ್ತಿದೆ. ಇದಕ್ಕೆ ಅನುಗುಣವಾಗಿ ಗುರುತು ಕಲ್ಲುಗಳನ್ನು ರಸ್ತೆಯುದ್ದಕ್ಕೂ ಸ್ಥಾಪಿಸಿದೆ.


*ಸ್ಥಗಿತಗೊಂಡ ಕಾಮಗಾರಿ
ಈಗಾಗಲೇ ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಎಂ.ಜಿ.ರಸ್ತೆಯ ಬದಿಯಲ್ಲಿ ಅಗತ್ಯ ಜಾಗವನ್ನು ಸ್ವಾಧಿನಪಡಿಸಿಕೊಂಡು ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದು ಚರಂಡಿ ನಿರ್ಮಾಣ ಕೆಲಸವಾಗುತ್ತಿದೆ. ಇನ್ನು ಕಾಮಗಾರಿಯನ್ನು ಮುಂದುವರೆಸಲು ರೈಲ್ವೆ ಇಲಾಖೆಯ ಅಪಸ್ವರವು ಅಡ್ಡಿಯಾಗಿದೆ. ಇದರಿಂದ ಅಂಬೇಡ್ಕರ್ ವೃತ್ತದಿಂದ ರಸ್ತೆ ವಿಸ್ತರಣೆ ಕೆಲಸವೇ ಪ್ರಾರಂಭವಾಗಿಲ್ಲ. ಜನರಲ್ಲಿ ಕಾಮಗಾರಿ ಬಗೆಗಿನ ಗೊಂದಲ ಮೂಡಿಸಬೇಕಾದ ಅಧಿಕಾರಿಗಳ ನಡುವೆ ಜಾಗಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲ. ನಾ ಕೊಡೆ ನಾ ಬಿಡೆ ಮಾತಿನಂತೆ ನಡೆದುಕೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net