ರಸ್ತೆಯ ಬದಿಯ ದುಂಡಿ ಕಲ್ಲಿಗೆ ಬೈಕ್ ಡಿಕ್ಕಿ; ಸವಾರ ಸಾವು

Bike Accident_2
Published on

ಬ್ಯಾಡಗಿ: ರಸ್ತೆ ಬದಿಯ ದುಂಡಿ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಮೋಟೆಬೆನ್ನೂರ ರಸ್ತೆಯಲ್ಲಿ ಶುಕ್ರವಾರ ಸಂಭವಿಸಿದೆ.
ಹಾವೇರಿ ನಗರದ ಇಜಾರಿಲಕಮಾಪುರದ ನಿವಾಸಿ ಧರ್ಮಪ್ಪ ರಾಮಪ್ಪ ಚಪ್ಪರದ (38) ಮೃತ ವ್ಯಕ್ತಿ.
ಇವರು ಬ್ಯಾಡಗಿಯಿಂದ ಹಾವೇರಿಗೆ ತೆರಳುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ರಸ್ತೆ ಬದಿಯ ದುಂಡಿ ಕಲ್ಲಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net