ಸ್ವಂತ ಖರ್ಚಿನಲ್ಲಿ ರಸ್ತೆ ಬದಿ ರಿಪೇರಿ

Road repair
Published on

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ ಕನೇನಹಳ್ಳಿ- ಸೂರಬೈಲ್ ರಸ್ತೆ ಪಕ್ಕದ ಹೊಂಡಗಳಿಗೆ ಮಣ್ಣು ಹಾಕುವ ಮೂಲಕ ಅಂಕಸ್ಥಳದ ಯುವಕ ರಾಮಚಂದ್ರ ಹೆಗಡೆ ಮಾದರಿಯಾಗಿದ್ದಾರೆ.

ಕನೇನಳ್ಳಿಯಿಂದ ಸೂರ್‌ಬೈಲ್ ತನಕ ರಸ್ತೆಗೆ ಎರಡು ವರ್ಷದ ಹಿಂದಷ್ಟೇ ಕಾಂಕ್ರೀಟ್ ಹಾಕಲಾಗಿತ್ತು. ಆದರೆ, ರಸ್ತೆ ಅಂಚಿಗೆ ಮಣ್ಣು ಹಾಕಿ ಸರಿಪಡಿಸದೆ, ಗುತ್ತಿಗೆದಾರರು ಹೊರಟು ಹೋಗಿದ್ದರು. ಕಾರಣ ರಸ್ತೆಯ ಅಂಚಿನಲ್ಲಿ ಕೆಲವೆಡೆ ಒಂದು ಅಡಿಗೂ ಮೀರಿದ ಹೊಂಡಗಳಾಗಿದ್ದವು. ಅದರಿಂದಾಗಿ ವಾಹನ ಸವಾರರು ಕಷ್ಟಪಡುವಂತಾಗಿತ್ತು.

ಇದನ್ನು ಕಂಡ ಯುವಕ ಕನೇನಳ್ಳಿ-ಅಂಕಸ್ಥಳದ ರಾಮಚಂದ್ರ ನಾಗೇಂದ್ರ ಹೆಗಡೆ, ಸ್ವಂತ ಖರ್ಚಿನಲ್ಲಿ ರಸ್ತೆಯ ಎರಡೂ ಬದಿಯ ಗುಂಡಿಗಳಿಗೆ ಮಣ್ಣು ಹಾಕಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ.

ಅವರು ಮಾಡುತ್ತಿರುವ ಜನಮೆಚ್ಚುವ ಕೆಲಸವನ್ನು ತಿಳಿದುಕೊಂಡ ಗ್ರಾ.ಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಸದಸ್ಯ ಗ.ರಾ. ಭಟ್ಟ ಸ್ಥಳಕ್ಕೆ ಆಗಮಿಸಿ ಒಳ್ಳೆಯ ಕೆಲಸಕ್ಕೆ ಪಂಚಾಯಿತಿ ವತಿಯಿಂದ ಸಹಾಯ ಮಾಡುವುದಾಗಿ ತಿಳಿಸಿದರು. ಯುವಕರು ಇಂತಹ ಕಾರ್ಯಗಳಿಂದ ಸ್ಫೂರ್ತಿ ಪಡೆದು ಪ್ರತಿ ಊರಿನಲ್ಲೂ ಇಂಥ ಜನಪರ ಕೆಲಸಗಳಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net