ರಸ್ತೆ ಬದಿಯ ಜಾಲಿ ತೆರವುಗೊಳಿಸಿ

24 SANDOOR 01
ಸಂಡೂರು ತಾಲೂಕಿನ ಜೋಗ ಗ್ರಾಮದ ಸುತ್ತಲಿನ ಹೊಲಗದ್ದೆಗಳ ರಸ್ತೆ ಬದಿ ಬೆಳೆದ ಜಾಲಿಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪಿಡಿಒ ಪಕ್ಕೀರಪ್ಪಗೆ ಎಐಕೆಕೆಎಂಎಸ್‌ನಿಂದ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿರಾಜ, ಜೋಗ ಗ್ರಾಮ ಘಟಕದ ಸಂಚಾಲಕ ಶಿವರುದ್ರಗೌಡ, ಸದಸ್ಯರಾದ ಹನುಮಂತ ರೆಡ್ಡಿ, ಹುಲುಗಪ್ಪ, ತಿಪ್ಪೇರುದ್ರ, ಬಸವ ಇನ್ನಿತರರಿದ್ದರು.
Published on

ಸಂಡೂರು: ತಾಲೂಕಿನ ಜೋಗ ಗ್ರಾಮದ ಹೊಲ-ಗದ್ದೆಗಳಿಗೆ ತೆರಳುವ ರಸ್ತೆಗಳನ್ನು ಆವರಿಸಿರುವ ಜಾಲಿಗಳನ್ನು ಕತ್ತರಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪಿಡಿಒ ಪಕ್ಕೀರಪ್ಪರಿಗೆ ಶುಕ್ರವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು. ಜೋಗ ಗ್ರಾಮದ ರೈತರು ಸುತ್ತಲಿನ ಹೊಲ-ಗದ್ದೆಗಳಿಗೆ ತೆರಳಲು ನಿರ್ಮಿಸಲಾಗಿರುವ ರಸ್ತೆಗಳ ಬದಿ ಜಾಲಿಗಿಡಗಳು ಬೆಳೆದಿವೆ. ಹಲವು ವರ್ಷಗಳಿಂದ ಬೆಳೆದ ಜಾಲಿ ಕತ್ತರಿಸದೆ ಇರುವುದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಅಧಿಕಾರಿಗಳು ಕೂಡಲೇ ಗಮನಹರಿಸಿ ಗ್ರಾಮದ ಸುತ್ತಲಿನ ಎಲ್ಲ ರಸ್ತೆಗಳಲ್ಲಿ ಬೆಳೆದ ಜಾಲಿ, ಗಿಡಗಂಟೆಗಳನ್ನು ಕತ್ತರಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net