110 ಅಡಿವರೆಗೆ ರಸ್ತೆ ವಿಸ್ತರಣೆಯಾಗಲಿ

ವಿ.ಎಸ್.ಭೋಜೆಗೌಡ
ವಿ.ಎಸ್.ಭೋಜೆಗೌಡ
Published on

ಬೇಲೂರು: ಪಟ್ಟಣದ ಕೆಂಪೇಗೌಡ ವೃತ್ತದಿಂದ ವಿಷ್ಣು ಸುಮುದ್ರ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 110 ಅಡಿವರೆಗೆ ವಿಸ್ತರಣೆ ಮಾಡಿದ ನಂತರ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರವೇ (ಪ್ರವೀಣ್‌ಶೆಟ್ಟಿ)ಬಣದ ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ ಆಗ್ರಹಿಸಿದ್ದಾರೆ.

ಪಟ್ಟಣದ ಮುಖ್ಯಹಾಗೂ ಕೆಂಪೇಗೌಡ ರಸ್ತೆ ವಿಸ್ತರಣೆ ಆಗಬೇಕೆನ್ನುವುದು ಜನತೆಯ ಕನಸು. ಕೆಂಪೇಗೌಡ ರಸ್ತೆ ವಿಸ್ತರಣೆ ಮತ್ತು ರಸ್ತೆ ಅಭಿವೃದ್ಧಿಗೆ ಮುಂದಾಗಿರುವ ಶಾಸಕ ಸುರೇಶ್ ಅವರ ಕಾರ್ಯವೈಖರಿ ಅಭಿನಂದನೀಯ. ಆದರೆ ಪಟ್ಟಣ ಪಂಚಾಯಿತಿಯಾಗಿದ್ದ ಕಾಲದಲ್ಲೇ ಕೆಂಪೇಗೌಡ ರಸ್ತೆಯ ಮಧ್ಯಭಾಗದಿಂದ 35 ಅಡಿ ಬಿಟ್ಟು ಕಟ್ಟಡ ನಿರ್ಮಿಸುವಂತೆ ಹಿಂದೆಯೇ ಅನುಮತಿ ಕೊಡುತ್ತಿದ್ದರು. ಪಸ್ತುತ ಬೇಲೂರು ಪುರಸಭೆಯಾಗಿದ್ದು, ಮುಂದೆ ನಗರಸಭೆಯಾಗುವ ಸಾಧ್ಯತೆ ಇದೆ. ಇದಕ್ಕನುಗುಣವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಕಿರಿದಾದ ರಸ್ತೆಯಿಂದಾಗಿ ಕೆಂಪೇಗೌಡ ರಸ್ತೆ ವ್ಯಾಪರ ವಹಿವಾಟಿನಿಂದ ಹಿಂದುಳಿದಿದೆ. ಈ ರಸ್ತೆ ಸಕಲೇಶಪುರ ಮೂಲಕ ಮಂಗಳೂರು, ಮಡಿಕೇರಿ, ಸುಬ್ರಹ್ಮಣ್ಯ ಸೇರಿದಂತೆ ಇತರ ಊರುಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳ ಸಂಚಾರವಿದ್ದು, ವಿಷ್ಣು ಸಮುದ್ರ ಕೆರೆಯನ್ನು ಸುಂದರ ಪ್ರವಾಸಿ ತಾಣ ಮಾಡುವ ಆಲೋಚನೆಯೊಂದಿಗೆ ಶಾಶ್ವತವಾಗಿ ಉಳಿಯುವ ಕೆಲಸವನ್ನು ಶಾಸಕರು ಮಾಡಲಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net