

ಚಿಕ್ಕೋಡಿ: ನಾವು ಇಡುವ ಪ್ರತಿಯೊಂದು ಹೆಜ್ಜೆಗೂ ನಿಯಮಗಳಿರುತ್ತವೆ. ಅದೇ ರೀತಿ ವಾಹನ ಚಲಾಯಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕೆಂದು ಸಂಚಾರ ಪೊಲೀಸ್ ಠಾಣೆಯ ಇನ್ ್ಸಪೆಕ್ಟರ್ ಎಸ್.ಎಂ.ಕಮತಗಿ ಹೇಳಿದರು.
ತಾಲೂಕಿನ ಪ್ರಾದೇಶಿಕ ಸಾರಿಗೆ ಇಲಾಖೆ ಚಿಕ್ಕೋಡಿ ಮತ್ತು ಚೌಸನ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಂಜುನಾಥ ಶಿರಾಳಿ ಮಾತನಾಡಿ, ರಸ್ತೆ ಅಪಘಾತಗಳನ್ನು ತಪ್ಪಿಸಲು ವಾಹನ ಚಾಲಕರು ರಸ್ತೆ ನಿಯಮ ಪಾಲಿಸಬೇಕು ಎಂದರು.
ಮೋಟಾರ್ ವಾಹನ ತರಬೇತಿ ಸಂಘದ ಅಧ್ಯಕ್ಷ ಎಂ.ಆರ್.ಮುನ್ನೋಳ್ಳಿಕರ ಹಾಗೂ ಪ್ರಾಧ್ಯಾಪಕ ಡಾ.ಕನಕಾಚಲ ಕನಕಗಿರಿ ಮಾತನಾಡಿದರು.
ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು ಹಾಗೂ ಹೆಲ್ಮೆಟ್ ವಿತರಿಸಲಾಯಿತು.
ಪ್ರಾಧ್ಯಾಪಕ ಡಾ.ನಂದಕುಮಾರ ಶಿಂಧೆ, ಸಾರಿಗೆ ಇಲಾಖೆಯ ಆರಕ್ಷಕ ಮಹೇಶ ಹನುಮಶೇಠ, ಜಿ.ಎಸ್.ಕುಂಗಾರೆ, ಉಮೇಶ ಕೋರೆ, ಸಂದೀಪ ಕಾಂಬಳೆ, ರಾಜೀವ ಮಾನೆ ಇತರರಿದ್ದರು. ಎ.ಎ.ಅಡಲಗಿ ಸ್ವಾಗತಿಸಿದರು. ಬನ್ನಪ್ಪ ಚೌಗಲೆ ಮತ್ತು ಲಕ್ಷ್ಮೀ ಪಾಟೀಲ ನಿರೂಪಿಸಿದರು. ಪರಶುರಾಮ ಕುರುಬೆಟ್ ವಂದಿಸಿದರು