ಜೀವ ಉಳಿಸಿಕೊಳ್ಳಲು ರಸ್ತೆ ನಿಯಮ ಪಾಲನೆ ಕಡ್ಡಾಯ

Road Safety Public Awareness
Road Safety Public Awareness
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಜತೆಗೆ ಜೀವ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ನಗರ ಸಂಚಾರ ಪೊಲೀಸ್ ಠಾಣೆ ಎಎಸ್‌ಐ ಕೆ.ಮೋಹನ್ ತಿಳಿಸಿದರು.
ನಗರದ ಕುಣಿಗಲ್ ವೃತ್ತದಲ್ಲಿ ಗುಂಟೂರು ಆಕ್ಸ್‌ಫರ್ಡ್ ಎಲೈಟ್ ಟೆಕ್ನೊ ಸ್ಕೂಲ್‌ನಿಂದ ರಸ್ತೆ ಸುರಕ್ಷತೆ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಅಪಘಾತ ಸಂಭವಿಸಿ ಸಾವು ನೋವು ಉಂಟಾಗಲು ವಾಹನ ಚಾಲಕರ ಅಜಾಗರೂಕತೆಯೇ ಕಾರಣ. ಬೈಕ್ ಹಾಗೂ ಬೇರೆ ಯಾವುದೇ ವಾಹನ ಚಾಲನೆ ಮಾಡುವ ಚಾಲಕರು ಚಾಲನಾ ಪರವಾನಗಿ ಹೊಂದಿರುವ ಜತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಜತೆಗೆ ಪಾಲನೆ ಮಾಡಬೇಕು ಎಂದರು.
ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೊಳ್ಳಲಾಗುವುದು. ಸಂಚಾರ ನಿಯಮ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಂಡಿರುವುದು ಮಾದರಿ ಕಾರ್ಯ ಎಂದು ಶ್ಲಾಸಿದರು.
ಗುಲಾಬಿ ನೀಡಿ ಅರಿವು: ನಗರದ ಕುಣಿಗಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಗುಲಾಬಿ ಹೂವು ನೀಡಿ ನಿಯಮ ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
ನಗರ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಮಿರ್‌ಜಾ, ಸುಭಾಷ್, ಕೆ.ಪಿ.ಪ್ರದೀಪ್, ಗುಂಟೂರು ಆಕ್ಸ್‌ಫರ್ಡ್ ಎಲೈಟ್ ಟೆಕ್ಮೊ ಸ್ಕೂಲ್ ಶಿಕ್ಷಿಕರಾದ ರಾಜೇಶ್ವರಿ, ಸರೋಜಾ, ಶೀಲಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net