ರಸ್ತೆಸುರಕ್ಷತೆಯ ಮಾಹಿತಿ ಅಗತ್ಯ

6 TVG 01
Published on

ತಾವರಗೇರಾ: ಇಲ್ಲಿಯ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರಿಗೆ, ಸ್ಥಳೀಯ ಪೊಲೀಸ್ ಠಾಣೆಯಿಂದ ಶನಿವಾರ ತೆರೆದಮನೆ ಕಾರ್ಯಕ್ರಮ ನಡೆಯಿತು.

ಪಿಎಸ್‌ಐ ನಾಗರಾಜ ಕೊಟಗಿ ಅವರು ಪ್ರಥಮ ಮಾಹಿತಿ ದಾಖಲೆ (ಎಫ್. ಐ.ಆರ್.), ಪೋಕ್ಸೊ ಕಾಯ್ದೆ, ಆಯುಧಗಳ ಬಗ್ಗೆ ಮಾಹಿತಿ, ರೈಫಲ್, ಬಂದೂಕು, ಪಿಸ್ತೂಲುಗಳ ಸಂಕ್ಷಿಪ್ತ ಮಾಹಿತಿ ನೀಡಿದರು. ಟ್ರಾಫಿಕ್ ರೂಲ್ಸ್ , ರಸ್ತೆಸುರಕ್ಷತೆ, ಬೈಕ್, ಸ್ಕೂಟರ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಾವ ಕಾಗದಪತ್ರ ಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಬರುವಾಗ ಕಿಡಿಗೇಡಿಗಳು ಚುಡಾಯಿಸಿದರೆ, ಅವಾಚ್ಯ ಶಬ್ದ ಬಳಸಿದರೆ, ಬಸ್‌ನಲ್ಲಿ ಅನುಚಿತವಾಗಿ ವರ್ತಿಸಿದರೆ ತಕ್ಷಣ ಸಮೀಪದ ಠಾಣೆಗೆ ಮಾಹಿತಿ ನೀಡಬೇಕು. ಇಲ್ಲವೇ 112ಗೆ ಕರೆ ಮಾಡಿದರೆ ತಕ್ಷಣ ಪೊಲೀಸರು ನೆರವಿಗೆ ಬರಲಿದ್ದಾರೆ ಎಂದರು.

ಸಹ ಶಿಕ್ಷಕರಾದ ಮಂಜುನಾಥ ಬಿಳೇಗುಡ್ಡ, ವೆಂಕನಗೌಡ ಪಾಟೀಲ , ತಿಪ್ಪಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net