

ಹುಬ್ಬಳ್ಳಿ: ಇಲ್ಲಿಯ ನವನಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರ್ ಟಿಒ ಕಚೇರಿ, ಜಿಲ್ಲಾ ಅಗ್ನಿಶಾಮಕ ದಳ ಇವುಗಳ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಸ್ತೆಯಲ್ಲಿ ಸುರಕ್ಷತೆ ಹೇಗೆ, ವಾಹನ ಹಾಗೂ ಜೀವನದ ಸುರಕ್ಷತೆ ಕುರಿತು ವಿವರಿಸಿದರು. ರಸ್ತೆ ನಿಯಮಗಳನ್ನು ಪಾಲಿಸುವುದರ ಮೂಲಕ ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಪರರ ಜೀವನವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಎಸಿಪಿ ಡಾ. ವಿನೋದ ಮುಕ್ತೇದಾರ ಮಾತನಾಡಿ, ಸಂಚಾರ ನಿಯಮ ಪಾಲನೆಯಲ್ಲಿ ಚಾಲಕನ ಜವಾಬ್ದಾರಿ ಕುರಿತು ವಿವರಿಸಿದರು.
ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಆರ್.ಡಿ. ಹೆಬ್ಬಳ್ಳಿ ಮಾತನಾಡಿ, ಅಗ್ನಿ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಅದರಿಂದ ಸುರತವಾಗಿರಬೇಕು ಎಂದರು. ಸಂಜೀವಕುಮಾರ, ಎಂ.ಆರ್. ನಾಯಕ, ವಿಕಾಸ್ ಶಿವಾಜಿ ಇತರರು ಹಾಜರಿದ್ದರು.
ಸಂಚಾಲಕ ಗೌತಮ್ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಮುದೆನ್ನವರ ಸ್ವಾಗತಿಸಿದರು. ಗಾಯತ್ರಿ ಹುದ್ದಾರ ನಿರೂಪಿಸಿದರು. ಎಸ್.ಬಿ. ವಸ್ತ್ರಮಠ ವಂದಿಸಿದರು.