ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಾಗಾರ

Sul_Road safety
Published on

ಸುಳ್ಯ: ರೋಟರಿ ಕ್ಲಬ್ ಸುಳ್ಯ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ನಗರದ ಕೊಡಿಯಾಲಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಂಪನ್ಮೂಲ ವ್ಯಕ್ತಿ ವಕೀಲ ಸುಬ್ರಾಯ ಭಟ್ ದಳ ವಾಹನ ಚಲಾವಣೆ ಸಂದರ್ಭ ಎಚ್ಚರಿಕೆ, ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಯೂತ್ ಸರ್ವೀಸ್ ಡೈರೆಕ್ಟರ್ ಕಸ್ತೂರಿಶಂಕರ್ ಮತ್ತು ಉಪಾಧ್ಯಕ್ಷ ಡಾ.ರಾಮ್‌ಮೋಹನ್ ವಿದ್ಯಾರ್ಥಿಗಳಿಗೆ ಜೀವ-ಜೀವನದ ಎಚ್ಚರಿಕೆ ಮಾತು ತಿಳಿಸಿದರು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಉದಯಶಂಕರ್ ಎಚ್., ರೋಟರಿ ಸದಸ್ಯ ಪ್ರಭಾಕರ ಸಿ.ಎಚ್., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಲತಾ ಎಂ.ರೈ ಉಪಸ್ಥಿತರಿದ್ದರು.

ಪ್ರಾಂಶುಪಾಲ ಸತೀಶ್ ಕೆ.ಆರ್.ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net