ಪಾಲಾ ಬಾದಾಮಿ ರಸ್ತೆ ದುರಸ್ಥಿ ಯಾವಾಗ?

31GDG01A
Published on

ವಿಜಯವಾಣಿ ವಿಶೇಷ ಗದಗ
ನಗರದ ಮುಖ್ಯ ಗದಗ ಬೆಟಗೇರಿ ರಸ್ತೆ (ಪಾಲಾ ಬಾದಾಮಿ) ದುರಸ್ಥಿ ಅಧೋ ಗತಿ ಆಗಿದೆ. ಕೋಟ್ಯಂತರ ರೂ. ವೆಚ್ಚ ಭರಿಸಿ ಇತ್ತೀಚೆಗೆ ಮರು ಡಾಂಭರೀಕರಣ ಮಾಡಿದ ಗದಗ ನಗರದ ಮುಖ್ಯ ಪಾಲಾ ಬಾದಾಮಿ ರಸ್ತೆ ಹಲವಡೆ ದುರಸ್ತಿ ಮಾಡೆಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಒಂದೇ ವರ್ಷದ ಹಿಂದೆ ನಿಮಿರ್ಸಿದ ರಸ್ತೆ ಈಗ ಹಲವಡೆ ಹಾಳಾಗಿದ್ದರಿಂದ ಕಳಪೆ ಕಾಮಗಾರಿ ಆಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಮತ್ತು ಅವೈಜ್ಞಾನಿಕ ಎಂಬುದು ಮೇಲ್ನೋಟಕ್ಕೆ ಸಾಭಿತಾಗುತ್ತಿದೆ.
ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂ. ವೆಚ್ಚ ಭರಿಸಿದರೂ ಸದೃಢ ರಸ್ತೆ ನಿಮಿರ್ಸಲು ಸಾಧ್ಯವಾಗಿಲ್ಲ. ಮಳೆಯಿಂದಾಗಿ ರಸ್ತೆಯ ಪ್ರಮುಖ ವೃತ್ತಗಳಲ್ಲಿ ಬೃಹತ್​ ತಗ್ಗು ಗುಂಡಿಗಳು ಬಿದ್ದಿದ್ದು ವಾಹನ ಸವಾರರಿಗೆ ಅವಡವನ್ನು ಆಹ್ವಾನಿಸುವಂತಿವೆ. ಮಳೆಯಿಂದಾಗಿ ಬಹುತೇಕ ಕಡೆ ಡಾಂಬರೀಕರಣ ಕಿತ್ತು ಹೋದರು ಲೋಕೋಪಯೋಗಿ ಇಲಾಖೆಯಿಂದ ದುರಸ್ಥಿಗೊಳಿಸುವ ಚಿಂತನೆಯೆ ನಡೆದಿಲ್ಲ.
ಸ್ಪಾಟ್​ಗಳು:
ಸ್ಥಳಿಯ ಗುತ್ತಿಗೆದಾರರು 2023ರಲ್ಲಿ ನಗರದ ಪಾಲಾ ಬಾದಾಮಿ ರಸ್ತೆಯನ್ನು 4 ಕೋಟಿ ವೆಚ್ಚದಲ್ಲಿ ಮರು ಡಾಂಭರೀಕರಣ ಮಾಡಿದ್ದರು. ನಗರದ ಹಸಿರು ಕೆರೆ ಸಮೀಪದ ವರ್ತುಲದಲ್ಲಿ ಹಲವು ತಗ್ಗು ಗುಂಡಿಗಳು ಬಿದ್ದಿವೆ. ಮಾರುಕಟ್ಟೆಯಿಂದ ಸಂಭಾಪುರ ರಸ್ತೆ ಕಡೆಗೆ, ಜಿಲ್ಲಾಧಿಕಾರಿ ಕಚೇರಿಯೆಡೆಗೆ ಪ್ರಯಾಣಿಸುವ ಸಂದರ್ಭದಲ್ಲಿ ವಾಹನಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ದ್ವಿಚಕ್ರವಾಹ ಸವಾರರು ಮಕ್ಕಳನ್ನು ಶಾಲೆಗಳಿಗೆ ಬಿಟ್ಟು, ಕರೆದುಕೊಂಡು ಬರುವ ಸಮಯದಲ್ಲಿ ಈ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ಗುಂಡಿಗಳು ಭಯ ಹುಟ್ಟಿಸುತ್ತವೆ ಎಂಬುದು ಸಾರ್ವಜನಿಕರ ಆರೋಪ. ಇನ್ನೂ ಹಳೇ ಡಿಸಿ ಆಫಿಸ್​ ವೃತ್ತದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ರಸ್ತೆ ಬಿಟ್ಟು ಚರಂಡಿಗೆ ಸರಿಯುವುದಿಲ್ಲ. ಎಪಿಎಂಸಿ ಪ್ರಾಂಗಣದಿಂದ ನಿರಂತರವಾಗಿ ನೀರು ಹರಿದು ಬರುತ್ತಿರುವುದರಿಂದ ಹಳೇ ಡಿಸಿ ಆಫಿಸ್​ ವೃತ್ತದಲ್ಲಿ ಸಂಚಾರ ವ್ಯವಸ್ಥೆ ಮತ್ತಷ್ಟು ಬಿಗಡಾಗಿಸಿದೆ. ಇದರಿಂದಾಗಿ 10 ಅಡಿ ಉದ್ದ ಮತ್ತು 20 ಅಡಿ ವ್ಯಾಪ್ತಿಯಲ್ಲಿ ಗುಂಡಿಗಳು ಸೃಷ್ಟಿ ಆಗಿದೆ. ಮಳೆ ಸಂದರ್ಭದಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ಪ್ರಯಾಣಿಕರಿಗೆ ಆಳ ಆಗಲ ತಿಳೀಯದೇ ಇರುವುದರಿಂದ ನೇರವಾಗಿ ಗುಂಡಿಯಲ್ಲಿ ಪ್ರಯಾಣಿಸಿ ಅವಡಕ್ಕೆ ಈಡಾಗುತ್ತಿದ್ದಾರೆ. ಇದರಿಂದಾಗಿ ಸಂಚಾರ ವ್ಯವಸ್ಥೆಯೂ ಹದಗೆಡುತ್ತಿದೆ.

ಕೋಟ್​:
ನಗರದ ಮುಖ್ಯ ಪಾಲಾ ಬಾದಾಮಿ ರಸ್ತೆಗೆ ಪ್ಯಾಚಿಂಗ್​ ಕೆಲಸ ನಡೆಸಬೇಕಿದೆ. ಟೆಂಡರ್​ ಕರೆಯಲು ಸಿದ್ಧತೆ ನಡೆಸಲಾಗಿದೆ. ಮಳೆ ಬಿಡುವುಕೊಟ್ಟ ಮೇಲೆ ಕಾಮಗಾರಿ ಆರಂಭಿಸಲಾವುದು.
ವಿ.ಎನ್​. ಪಾಟೀಲ, ಮುಖ್ಯ ಇಂಜಿನಿಯರ್​,
ಲೋಕೋಪಯೋಗಿ ಇಲಾಖೆ, ಗದಗ

ಕೋಟ್​:
2023 ರಲ್ಲಿ ಮರು ಡಾಂಬರೀಕರಣ ಮಾಡಲಾಗಿತ್ತು. 2024 ಜನವರಿ ವರೆಗೆ ಮಾತ್ರ ನಿರ್ವಹಣೆ ನಮ್ಮದಾಗಿತ್ತು. ಈಗ ನಮ್ಮ ನಿರ್ವಹಣೆ ಇಲ್ಲ. ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮಾಡಬೇಕಾಗುತ್ತದೆ.
ನಾರಾಯಣ ತಿರ್ಲಾಪುರ, ಮರು ಡಾಂಭರೀಕರಣ ಮಾಡಿದ ಗುತ್ತಿಗೆದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net