ಕಂಪ್ಲಿ ಕ್ರಾಸ್-ಮುಂಡರಗಿ ರಸ್ತೆ ರಿಪೇರಿಗೆ ಅನುದಾನ ಕೊರತೆ

ROAD PROBLEM
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಗುಂಡಿಮಯವಾದ ಶಿಗ್ಗಾಂವ-ಕಲ್ಮಲಾ ರಾಜ್ಯ ಹೆದ್ದಾರಿ. ಗುಂಡಿಗಳು ಮಳೆಯ ನೀರಿನಿಂದ ತುಂಬಿರುವುದು.
Published on

ಅಳವಂಡಿ: ಸಮೀಪದ ಕಂಪ್ಲಿ ಕ್ರಾಸ್‌ನಿಂದ ಮುಂಡರಗಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಗ್ಗು, ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರ ದುರಸ್ತವಾಗಿದೆ. ದ್ವಿಚಕ್ರ ವಾಹನ ಸವಾರರು ಜೀವವನ್ನು ಕೈಯಲ್ಲಿಡಿದು ಓಡಾಡಬೇಕಾದಂಥ ಪರಿಸ್ಥಿತಿ ಇದೆ.

ಶಿಗ್ಗಾಂವ-ಕಲ್ಮಲಾ ರಾಜ್ಯ ಹೆದ್ದಾರಿ ವ್ಯಾಪ್ತಿಯ ಕೊಪ್ಪಳ-ಮುಂಡರಗಿ ಮುಖ್ಯರಸ್ತೆಯಲ್ಲಿ ಕಂಪ್ಲಿ ಕ್ರಾಸ್‌ನಿಂದ ಮುಂಡರಗಿ ಸರಹದ್ದಿನವರೆಗೂ ರಸ್ತೆ ಹದಗೆಟ್ಟಿದೆ. ಕಳೆದ ವರ್ಷ ಕೊಪ್ಪಳ-ಮುಂಡರಗಿ ರಸ್ತೆ ದುರಸ್ತಿಗಾಗಿ ಹೋರಾಟ, ಪಾದಯಾತ್ರೆ ನಡೆದವು. ಇದರ ಫಲವಾಗಿ ಮೈನಳ್ಳಿ ಕ್ರಾಸ್‌ನಿಂದ ಕಂಪ್ಲಿ ಕ್ರಾಸ್‌ವರೆಗೆ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನೂಕೂಲ ಕಲ್ಪಿಸಲಾಗಿದೆ. ಆದರೆ, ಅನುದಾನ ಕೊರತೆಯ ನೆಪವೊಡ್ಡಿ ಕಂಪ್ಲಿ ಕ್ರಾಸ್‌ನಿಂದ ಬೆಳಗಟ್ಟಿವರೆಗಿನ ರಸ್ತೆ ದುರಸ್ತಿಗೆ ಪಿಡಬ್ಲುೃಡಿ ನಿರ್ಲಕ್ಷಿಸಿದೆ.

ಕಂಪ್ಲಿ ಕ್ರಾಸ್‌ನಿಂದ ಅಳವಂಡಿ, ರಘುನಾಥನಹಳ್ಳಿ, ಹಟ್ಟಿ, ಬೆಳಗಟ್ಟಿ, ಮೋರನಾಳ, ಬೆಟಗೇರಿ, ಬೋಚನಹಳ್ಳಿ, ನಿಲೋಗಿಪುರ, ಭೈರಾಪುರ ಸೇರಿ ಮುಂತಾದ ಗ್ರಾಮಗಳ ಸಾರ್ವಜನಿಕರು ಮುಂಡರಗಿ ನಗರಕ್ಕೆ ವಾಣಿಜ್ಯ-ವ್ಯವಹಾರ, ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿದ್ದು, ನೀರು ತಂಬಿಕೊಂಡು ಕೊಳದಂತಾಗಿವೆ. ಸವಾರರು ಸ್ವಲ್ಪ ನಿರ್ಲಕ್ಷಿಸಿದರೂ ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ನಿಶ್ಚಿತ. ರಸ್ತೆ ದುರಸ್ತಿ ಸಂಬಂಧ ಸಾರ್ವಜನಿಕರು, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರು ರಸ್ತೆ ದುರಸ್ತಿ ಮಾಡಿಲ್ಲ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಂಪ್ಲಿ ಕ್ರಾಸ್‌ನಿಂದ ಬೆಳಗಟ್ಟಿವರೆಗಿನ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ಟೆಂಡರ್ ಕರೆದು ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನೂಕೂಲ ಮಾಡಿಕೊಡಲಾಗುವುದು.ಶ್ಯಾಮಣ್ಣ ನಾರಿನಾಳ, ಎಇಇ ಪಿಡಬ್ಲುೃಡಿ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net