ರಸ್ತೆ ಓಟದ ಸ್ಪರ್ಧೆ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ಎಜ್ಯುಕೇಶನ್​ ಬೋರ್ಡಿನ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ರಸ್ತೆ ಓಟದ ಸ್ಪರ್ಧೆಯನ್ನು ನ. 10ರಂದು ಏರ್ಪಡಿಸಲಾಗಿದೆ.

ಸ್ಪರ್ಧೆಯು ಕಾಲೇಜು ಹಾಗೂ ಹೈಸ್ಕೂಲ್​ ಬಾಲಕರಿಗೆ 5 ಕಿ.ಮೀ. ಮತ್ತು ಬಾಲಕಿಯರಿಗಾಗಿ 3 ಕಿ.ಮೀ. ದೂರದ ಓಟ ನಡೆಯಲಿದೆ. ಸ್ಪರ್ಧೆಯು ಬೆಳಗ್ಗೆ 6.30ಕ್ಕೆ ಮಾಳಮಡ್ಡಿ ಕೆ.ಇ. ಬೋರ್ಡ್ಸ್​ ಹೈಸ್ಕೂಲ್​ ಆವರಣದಿಂದ ಆರಂಭವಾಗಿ ಕಲ್ಯಾಣನಗರ ಮಾರ್ಗವಾಗಿ ಸಾಗಿ ಮತ್ತೆ ಕೆ.ಇ. ಬೋರ್ಡ್ಸ್​ ಹೈಸ್ಕೂಲು ಆವರಣದಲ್ಲಿ ಮುಕ್ತಾಯಗೊಳ್ಳಲಿದೆ. ಪಾಲಿಕೆ ಸದಸ್ಯ ವಿಷ್ಣುತಿರ್ಥ ಕೊರ್ಲಹಳ್ಳಿ ಸ್ಪರ್ಧೆಗೆ ಚಾಲನೆ ನೀಡುವರು. ಸುಮಾರು 150 ಓಟಗಾರರು ಪಾಲ್ಗೊಳ್ಳಲಿದ್ದಾರೆ.

ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೆ.ಇ. ಬೋಡಿರ್ನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಡಿ.ಎಸ್​. ರಾಜಪುರೋಹಿತ ಹಾಗೂ ಖಜಾಂಚಿ ಎನ್​.ಎಸ್​. ಕುಲಕರ್ಣಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ ಎಂದು ಕ್ರೀಡಾಭಿವೃದ್ಧಿ ಅಧಿಕಾರಿ ವಸಂತ ಮುರ್ಡೇಶ್ವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net