ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

Road problem strike
Published on


ಅಂಕೋಲಾ: ಗೋಕರ್ಣ-ವಡ್ಡಿ-ಶಿರಸಿ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸರಿಪಡಿಸಿ ಎಂದು ವಿನಂತಿಸಿದರೂ ಈವರೆಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚದೆ ಸಂಚಾರಕ್ಕೆ ತೊಂದರೆ ಯಾಗಿರುವುದರಿಂದ ಹಿಲ್ಲೂರು ಗ್ರಾಮಸ್ಥರು ಶುಕ್ರವಾರ ರಸ್ತೆಯ ಮೇಲೆ ಬಾಳೆ ಗಿಡ ನೆಟ್ಟು ಆಡಳಿತದ ನಿರ್ಲಕ್ಷ್ಯ ಖಂಡಿಸಿ, ಪ್ರತಿಭಟನೆ ನಡೆಸಿದರು.
ತಾಲೂಕ ಕೇಂದ್ರದಿಂದ ಸರಿ ಸುಮಾರು 45 ಕಿ.ಮೀ.ದೂರವಿರುವ ಗೋಕರ್ಣ ಹೊಸಾಕಂಬಿ ಹೆಬ್ಬುಳ ಕೂಡು ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಈ ರಸ್ತೆಯಲ್ಲಿ ವಾಹನಗಳನ್ನು ಸಂಚಾರ ಮಾಡುವಾಗ ಹರಸಾಹಸ ಪಡಬೇಕಾಗುತ್ತದೆ. ಈ ಹಿಂದೆಯೂ ಕೂಡ ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ ಮಾಡಿದ್ದರೂ ರಾಜ್ಯ ಹೆದ್ದಾರಿ ಪ್ರಾಧಿಕಾರದವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಇರುವುದು ನಿಜಕ್ಕೂ ವಿಪ ರ್ಯಾಸವಾಗಿದೆ.
ಸ್ಥಳೀಯ ಗೋಪಾಲ ನಾಯಕ ಹಿಲ್ಲೂರು ಮಾತನಾಡಿ, ನಮ್ಮಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ ರಸ್ತೆಗೆ ಗುಂಡಿ ತುಂಬಲು ಕಳೆದ ೬ ತಿಂಗಳ ಹಿಂದೆ ಓರ್ವ ಗುತ್ತಿಗೆದಾರನಿಗೆ ಟೆಂಡರ್ ಆಗಿದೆ ಎಂದು ತಿಳಿದು ಬಂದಿದೆ. ಇದುವರೆಗೂ ರಸ್ತೆ ದುರಸ್ತೆ ಕಾಮಗಾರಿಗೆ ಪ್ರಾರಂಭಿಸಿಲ್ಲಾ. ನಾವೆಲ್ಲಾ ಸ್ಥಳೀಯರು ಸೇರಿ ಸಂಬAಧಪಟ್ಟ ಅಧಿಕಾರಿ ಮತ್ತು ಜನಪತ್ರಿಗಳಿಗೂ ಮನವಿ ಸಲ್ಲಿಸಿದ್ದರು. ಆದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಸಹಾಯಕರಾಗಿ ರಸ್ತೆಯ ಮೇಲೆ ಬಾಳೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸರಿಪಡಿಸದಿದ್ದಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಟ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ಹಿಲ್ಲೂರು ಪ್ರಮುಖರಾದ ಸುಧೀರ ನಾಯಕ, ಜಗದೀಶ ಹರಿಕಾಂತ, ಮಾಣಿ ನಾಯಕ, ಪ್ರಕಾಶ ನಾಯಕ, ಜೈರಾಮ, ರಾಮ ಶಿಂಧೆ, ಧಾಕು ಶಿಂಧೆ, ಗೋವಿಂದ ಹರಿಕಾಂತ, ಅಜಿತ ನಾಯಕ, ರವಿ, ಶ್ರವಣ, ಪುಟ್ಟು, ಮಂಜು, ಸುಧಾಕರ ಮಹಾಲೆ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net