VIDEO| ಕೆಸರುಗದ್ದೆಯಾಗಿರುವ ರಸ್ತೆ! ಮೋದಿಗೆ ಟ್ವೀಟ್​ ಮಾಡಿದ ಹಳ್ಳಿಗ!

road
Published on

ಬೆಳಗಾವಿ: ರಾಜ್ಯದ ಬೆಳಗಾವಿ ಜಿಲ್ಲೆಯ ಗ್ರಾಮಸ್ಥರೊಬ್ಬರು ತಮ್ಮ ಹಳ್ಳಿಯ ಸಂಪರ್ಕ ರಸ್ತೆಯ ಅಧ್ವಾನದ ಸ್ಥಿತಿಯ ಬಗ್ಗೆ ವಿಡಿಯೋ ಟ್ವೀಟ್​ ಮಾಡಿದ್ದಾರೆ. ಅದರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ 4 ವರ್ಷಗಳಿಂದ ಅಕ್ಕಪಕ್ಕದ ಹಳ್ಳಿಗರು ವ್ಯಥೆ ಪಡುತ್ತಿದ್ದೇವೆ ಎಂದು ಬಹಿರಂಗ ಪತ್ರ ಬರೆದಿದ್ದಾರೆ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರದ ನಿವಾಸಿ ಈರಣ್ಣ ಬೀಡಿ ಎಂಬುವರು ದೇವಲಾಪುರ ಮತ್ತು ನೇಗಿನಹಾಳ ಗ್ರಾಮಗಳ ನಡುವೆ ಇರುವ ಸಂಪರ್ಕ ರಸ್ತೆ ಕೆಸರುಗದ್ದೆಯಂತಾಗಿರುವ ಬಗ್ಗೆ ಗಮನ ಸೆಳೆದಿದ್ದಾರೆ. ದೊಡ್ಡ ಹಳ್ಳವಿರುವ ರಸ್ತೆಯ ಮೇಲೆ ಗ್ರಾಮಸ್ಥರು ಓಡಾಡಲು, ಹಸುಗಳನ್ನು ಕರೆದುಕೊಂಡು ಹೋಗಲು ಪಾಡು ಪಡುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ.

"ಪ್ರಧಾನಿ ಮೋದಿ ಅವರೆ, ದೇವಲಾಪುರ, ನೇಗಿನಹಾಳ ಮತ್ತು ಯರಡಳ​ ಗ್ರಾಮದ ಜನರು ಇಲ್ಲಿ ಜಮೀನು ಹೊಂದಿದ್ದಾರೆ. ಅವರೆಲ್ಲಾ ಕಳೆದ 4 ವರ್ಷಗಳಿಂದ ರಸ್ತೆಯ ಈ ದುಃಸ್ಥಿತಿಯಿಂದಾಗಿ ನರಳುತ್ತಿದ್ದಾರೆ" ಎಂದು ಈರಣ್ಣ ಅವರು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net