ಮನವಿ ಮಾಡಿದರೂ ಕ್ಯಾರೆ ಎನ್ನದ ಅಧಿಕಾರಿಗಳು: ಗುಂಡಿ ಬಿದ್ದ ರಸ್ತೆಯಲ್ಲೇ ಗಿಡ ನೆಟ್ಟ ಬಿಜೆಪಿ ಕಾರ್ಯಕರ್ತರು

Road Problem
Published on

ಮಂಡ್ಯ: ನಗರದ ಹೊಸಹಳ್ಳಿಯಲ್ಲಿ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ರಸ್ತೆ ಮಧ್ಯೆಯೇ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.

ಬಿಜೆಪಿ ರೈತ ಮೋರ್ಚಾ ನಗರ ಘಟಕದ ಅಧ್ಯಕ್ಷ ಹೊಸಹಳ್ಳಿ ಶಿವು ಮಾತನಾಡಿ, ಹೊಸಹಳ್ಳಿ ಮುಖ್ಯರಸ್ತೆ ಮೂಲಕ ಮಹದೇಶ್ವರಬೆಟ್ಟ, ಚಾಮರಾಜನಗರ, ಕೊಳ್ಳೇಗಾಲ, ನರಸೀಪುರ, ಕಿರುಗಾವಲು ಕಡೆಗೆ ಸಂಚಾರ ಮಾಡಲಾಗುವುದು. ಪ್ರತಿನಿತ್ಯ ಹತ್ತಾರು ಶಾಲಾ ವಾಹನಗಳು ಸಂಚರಿಸುತ್ತದೆ. ಹೊಸಹಳ್ಳಿ ರಸ್ತೆಯಿಂದ ಸರ್ಕಾರಿ ಶಾಲೆಯವರೆಗೂ ಸುಮಾರು ಗುಂಡಿಗಳಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ನಗರಸಭೆ, ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಕಚೇರಿ ಮತ್ತು ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಮೇಶ್, ಎಚ್.ಕೆ.ಮಂಜುನಾಥ್, ಕೃಷ್ಣ, ಕಾಂತರಾಜು, ಮಾದರಾಜ ಅರಸ್, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net